

ಚಿತ್ರದುರ್ಗ: ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕಿದರೆ ಸಾಲದು 1974ರ ಗೆಜೆಟ್ ಅಧಿಸೂಚನೆಯನ್ನೇ ರದ್ದುಪಡಿಸುವ ಮೂಲಕ ರಾಜ್ಯದಲ್ಲಿ ತಲೆದೋರಿದ ವಕ್ಫ್ ಗೊಂದಲ ನಿವಾರಿಸುವಂತೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಒತ್ತಾಯಿಸಿದ್ದಾರೆ.
ವಕ್ಫ್ ಬೋರ್ಡ್ ರಾಜ್ಯಕ್ಕೆ, ದೇಶಕ್ಕೆ ಕಂಟಕವಾಗಿದೆ. ಯಾ ವುದೇ ಕಾರಣಕ್ಕೂ ರೈತರ, ಮಠ, ಮಂದಿರಗಳ ಭೂಮಿ ಸ್ವಾಧೀನಕ್ಕೆ ಬಿಡುವುದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಹಿಂದುಗಳಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ತಕ್ಕ ಶಾಸ್ತಿ ಅನುಭವಿಸಲಿದೆ. ದಾನದಿಂದ ಬಂದಿದ್ದರೆ ಮಾತ್ರ ಅದು ವಕ್ಫ್ ಆಸ್ತಿ ಯಾಗುತ್ತದೆ. ರಾತ್ರೋರಾತ್ರಿ ದಲಿತರ, ಬಡವರ, ಹಿಂದುಳಿದವರ, ಮಠ ಮಾನ್ಯಗಳ ಆಸ್ತಿಗಳು ವಕ್ಫ್‌ಗೆ ಸೇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪಾಕಿಸ್ತಾನ,ಬಾಂಗ್ಲಾದಲ್ಲಿ ಇಲ್ಲದ ವಕ್ಫ್‌ಬೋರ್ಡ್ ದೇಶದಲ್ಲಿ ಅಸ್ತಿತ್ವಕ್ಕೆ ಬರಲು ಮಾಜಿ ಪ್ರಧಾನಿ ದಿ.ನೆಹರು ಕಾರಣ. ಯಾರ ಪ್ರಾಣ ತಿನ್ನಲು ಈ ಬೋರ್ಡ್‌ನ್ನು ಸ್ಥಾಪಿಸಲಾಯಿತು ಎಂದು ಕಿಡಿ ಕಾರಿದರು.
1954ರಲ್ಲಿ ಬೋರ್ಡ್ ಸ್ಥಾಪನೆಯಾಗಿದ್ದರೂ 10,11,12ನೇ ಶತಮಾನದ ಆಸ್ತಿಗಳು ಅದರ ಹೆಸರಿಗೆ ಸೇರಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಬೋರ್ಡ್ ಆಸ್ತಿ ನೋಡಿದರೆ ಹಿಂದುಗಳಿಗೆ ಭಯವಾಗಬೇಕೆಂದ ಸಚಿವ ಜಮೀರ್‌ಅಹಮದ್‌ಖಾನ್ ನಡೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ನಾನು ಯಾರಿಗೂ ಜಗ್ಗಲ್ಲ,ಬಗ್ಗಲ್ಲ ಎಂದಿದ್ದ ಸಿಎಂ ಮುಡಾ ಸೈಟ್ ಹಿಂತಿರುಗಿಸಿದ್ದಾರೆ. ಖರ್ಗೆ ಕುಟುಂಬ ವರ್ಗದವರು, 5 ಎಕರೆ ಜಮೀನು ಹಿಂದಕ್ಕೆ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.
ಹೊಳಲ್ಕೆರೆ ತಾಲೂಕು ನಂದನ ಹೊಸೂರಿನ, ಸರ್ವೇ ನಂ. 166 ರ 5.68 ಎಕರೆ ಸ್ಮಶಾನದ ಜಾಗ ಖಬರ್‌ಸ್ತಾನ್ ಎಂದಾಗಿದೆ ಮುಸ್ಲಿಮರೇ ಇಲ್ಲದ ಊರಲ್ಲಿ ಖಬರ್‌ಸ್ತಾನ್ ಯಾಕೆ? ಚಳ್ಳಕೆರೆಯಲ್ಲಿ ಚರ್ಮ ಹದ ಮಾಡುವ ಜಾಗವನ್ನು ಬೋರ್ಡ್‌ಗೆ ಸೇರಿಸಲು ಮನವಿ ಮಾಡಲಾಗಿದೆ ಎಂದು ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಪಿಸಿಗೆ ನಮ್ಮ ಸಮಿತಿ ವರದಿ ಕೊಡಲಿದೆ. ಸಿಎಂ ಗಮನ ಕೂಡ ಸೆಳೆಯಲಿದೆ. ಅನ್ವರ್‌ಮಾಣಿಪ್ಪಾಡಿ ವರದಿಯಲ್ಲಿ ಬೋರ್ಡ್‌ಗೆ ಸೇರಿದ 54 ಸಾವಿರ ಎಕರೆ ಜಮೀನು ಪೈಕಿ,26 ಸಾವಿರ ಎಕರೆ ಜಾಗ ಕಾಂಗ್ರೆಸಿನ ಹಲವು ಧುರೀಣರ ಪಾಲಾಗಿದೆ. 2016-17ರಲ್ಲಿ ಸಿದ್ದರಾಮಯ್ಯ ಸರ್ಕಾರವಿತ್ತು. ಆಗ ಹೊರಡಿಸಿದ್ದ ಆದೇಶವನ್ನು ಅಧಿಕಾರಿಗಳು ಪಾಲಿಸಿ ಕೊಂಡು ಬಂದಿದ್ದಾರೆ. ನಂತರ ಬಂದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯೂಡಿಯೂರಪ್ಪ,ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಅವಧಿ ಈ ವಿಷಯ ಗಮನಕ್ಕೆ ಬಂದಿರಲಿಲ್ಲ. ಗೋಮಾಳ ಜಾಗ ಕಬಳಿಸಲು ಸರ್ಕಾರ ಮುಂದಾಗಿದೆ. ಗೋಮಾಳ ಜಾಗಕ್ಕೆ ಕೈ ಹಾಕಿದರೆ ಈ ಸರ್ಕಾರದ ಗ್ವಾಮಾಳಕ್ಕೆ(ಕುತ್ತಿಗೆಗೆ )ನಾವು ಕೈ ಹಾಕುತ್ತೇವೆ ಎಂದು ನಾರಾಯಣ ಸ್ವಾಮಿ ಎಚ್ಚರಿಸಿದರು.
ಮಾಜಿ ಸಚಿವ ಸುನಿಲ್‌ಕುಮಾರ್,ಮಾಜಿ ಸಂಸದ ಮುನಿಸ್ವಾಮಿ, ಶಾಸಕ ಡಾ.ಎಂ.ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಎಂ ಎಲ್ ಸಿ ವೈ.ಎ.ನಾರಾಯಣ ಸ್ವಾಮಿ, ಮಾಜಿ ಶಾಸಕ ನೇರ‌್ಲಗುಂಟೆ ತಿಪ್ಪೇಸ್ವಾಮಿ,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,ಕೆ.ಟಿ.ಕುಮಾರ ಸ್ವಾಮಿ, ಸುರೇಶ್ ಸಿದ್ದಾ ಪುರ, ಮಾಧುರಿ ಗಿರೀಶ್, ಮಲ್ಲಿಕಾರ್ಜುನ್, ಸಂಪತ್ ಕುಮಾರ್, ಸಿದ್ದೇಶ್, ನವೀನ್ ಚಾಲಕ್ಯ, ನಾಗರಾಜ್ ಬೇ ಾಗರಾಜ್ ಬೇದ್ರೆ ಇತರರು ಇದ್ದರು.