ವಕೀಲರಿಗೆ ಅಧ್ಯಯನ, ಸಂಶೋಧನೆ ಅಗತ್ಯ: ನ್ಯಾ.ಕೆ. ಸೋಮಶೇಖರ್

2
Published on

ಮೈಸೂರು: ವಕೀಲರು ಯಾವುದೇ ಪ್ರಕರಣವನ್ನು ಬಗೆಹರಿಸಲು ತಮ್ಮ ಬೌದ್ಧಿಕ ಶಕ್ತಿಯನ್ನು ಉಪಯೋಗಿಸಬೇಕು. ಇದಕ್ಕೆ ಹೆಚ್ಚು ಶ್ರಮವಹಿಸುವ ಜತೆಗೆ ಅಧ್ಯಯನ, ಶೋಧ ಮತ್ತು ಸಂಶೋಧನೆ(ಸರ್ಚ್ ಆ್ಯಂಡ್ ರಿಸರ್ಚ್) ಮಾಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಮೈಸೂರು ವಿಭಾಗದ ವತಿಯಿಂದ ವಕೀಲರಿಗಾಗಿ ಶನಿವಾರ ಆಯೋಜಿಸಿದ್ದ ಪ್ರಶಿಕ್ಷಣ ವರ್ಗ 2022-23 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂನು ಕ್ಷೇತ್ರ ವಿಶಾಲವಾಗಿದ್ದು, ವಕೀಲರು ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ವಕೀಲರು ಮಾಡಬೇಕು. ನ್ಯಾಯಾಲಯ ಎಂಬುದು ನ್ಯಾಯದ ದೇಗುಲ. ನಾವುಗಳೆಲ್ಲ ಸಮಾಜಮುಖಿ ಕೆಲಸಗಳಲ್ಲಿ ತೊಡಗಬೇಕು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಭಾರತ ಸಂವಿಧಾನದ ಪ್ರಮುಖ ಅಂಗಗಳು. ಶಾಸಕಾಂಗ ಮತ್ತು ಕಾರ್ಯಾಂಗ ಎರಡು ಚಕ್ರಗಳಿದ್ದಂತೆ. ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವ ನಮಗೆ ಅವು ತವರು ಮನೆ ಇದ್ದಂತೆ ಎಂದರು.

ಹಿರಿಯ ವಕೀಲರಾದ ಪಿ.ಡಿ.ಮೇದಪ್ಪ, ಎ.ಎಸ್.ನಟರಾಜು, ಓ.ಶ್ಯಾಮ್‌ಭಟ್, ಕೆ.ಆರ್.ಶಿವಶಂಕರ್, ಸಿ.ಅಪ್ಪಾಜಿಗೌಡ, ವಿ.ಮೈಥಿಲಿ ಅವರನ್ನು ಸನ್ಮಾನಿಸಲಾಯಿತು.
ಅಧಿವಕ್ತಾ ಪರಿಷತ್ ಅಧ್ಯಕ್ಷೆ ವಿ.ಶಾರದಾ, ಪೂರ್ವ ಅಸಿಸ್ಟೆಂಟ್ ಸಾಲಿಸಿಟರಲ್ ಜನರಲ್ ಆಫ್ ಇಂಡಿಯಾ ಸಿ.ಶಶಿಕಾಂತ, ಚಾಮರಾಜನಗರ ಅಧಿವಕ್ತಾ ಪರಿಷತ್ ಅಧ್ಯಕ್ಷ ಕೆ.ಯೋಗೇಶ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪಣಿಚೇತನ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net