

ಕಲಬುರಗಿ: ವಕೀಲರ ಮೇಲೆ ನಡೆಯುವ ಹಲ್ಲೆ ತಡೆಯುವುದುರ ಜತೆಗೆ ಆರೋಪಿಗಳಿಗೆ ಕಾನೂನು ಮೂಲಕ ಶಿಕ್ಷೆ ವಿಧಿಸುವಂಥ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ ನುಡಿದಂತೆ ನಡೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಲಯ, ವಕೀಲರ ಸಂಘದ ಕಟ್ಟಡ, ಕೆಎಟಿ, ಹೈಕೋರ್ಟ್, ಜಯದೇವ, ಕಿದ್ವಾಯಿ, ಟ್ರಾಮಾ ಕೇರ್ ಸೆಂಟರ್, ಕೇಂದ್ರೀಯ ವಿಶ್ವವಿದ್ಯಾಲಯ ಸೇರಿ ಹಲವಾರು ಗಮನಾರ್ಹ ಯೋಜನೆಗಳನ್ನು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹಾಗೂ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ಬಂದಿವೆ. ಇದಕ್ಕೆಲ್ಲ ನಿಮ್ಮೆಲ್ಲರ ಮತದಾನದ ಆಶೀರ್ವಾದವೇ ಕಾರಣ ಎಂದರು.
ಕಳೆದ ಹತ್ತು ವರ್ಷದಲ್ಲಿ ೩೦,೦೦೦ ಕಾಮಗಾರಿ, ೮,೦೦೦ ಮೆಡಿಕಲ್, ೨೨,೨೧೯ ಇಂಜಿನಿಯರಿAಗ್, ೫,೫೦೦ ಫಾರ್ಮಸಿ, ೩,೪೪೮ ಐ ಎಚ್‌ಆರ್‌ಸಿ ಸೀಟು ಪಡೆಯಲಾಗಿದೆ. ೧,೧೯,೪೧೯ ನೇರ ನೇಮಕಾತಿ ಮಾಡಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಆರ್ಟಿಕಲï ೩೭೧(ಜೆ) ಅಡಿ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಮತದ ಮೌಲ್ಯ ವಕೀಲರಿಗೆ ಸರಿಯಾಗಿ ತಿಳಿದಿದೆ. ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಾಗಿದ್ದರೂ ಅವರ ವೈಯಕ್ತಿಕ ಸೋಲಲ್ಲ. ಅದು ಕಲಬುರಗಿ ಸೋಲು. ಕಲಬುರಗಿ ಬಾರ್ ಅಸೋಸಿಯೇಷನ್ ಸದಸ್ಯರಾದ ಖರ್ಗೆ ಸಾಹೇಬರು ಆರ್ಟಿಕಲï ೩೭೧(ಜೆ) ಸೇರಿ ಹಲವಾರು ಪ್ರಮುಖ ಯೋಜನೆಗಳನ್ನು ಜಿ¯್ಲÉಗೆ ತಂದಿದ್ದಾರೆ. ಈಗ ಅವರ ಮಾರ್ಗದರ್ಶನದಲ್ಲಿ ಅಭ್ಯರ್ಥಿ ರಾಧಾಕೃಷ್ಣ ಚುನಾವಣಾ ಕಣದಲ್ಲಿದ್ದು, ಗೆಲ್ಲಿಸಿ ಎಂದು ಮನವಿ ಮಾಡಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಸಂಘದ ಅಧ್ಯP್ಷÀ ಗುಪ್ತಲಿಂಗ ಪಾಟೀಲ್, ಬಸವರಾಜ ಬಿರಾದಾರ್, ಮಹಾಂತೇಶ ಕೌಲಗಿ, ಬಾಬು ಒಂಟಿ ಇತರರಿದ್ದರು