

ಹುಬ್ಬಳ್ಳಿ: ವಕೀಲರ ಸಂರಕ್ಷಣಾ ಕರಡು ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಯಥಾವತ್ತಾಗಿ ಜಾರಿಗೆ ತರಲು ಆಗ್ರಹಿಸಿ ಹುಬ್ಬಳ್ಳಿ ವಕೀಲರ ಸಂಘದ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಎರಡೂ ಸದನಗಳಲ್ಲಿ ವಿಧೇಯಕ ಅಂಗೀಕರಿಸಬೇಕು. ತಕ್ಷಣವೇ ರಾಜ್ಯಪಾಲರ ಅಂಕಿತ ಹಾಕಿಸಿ ಜಾರಿಗೆ ತರಬೇಕು ಎಂದು ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ ನೇತೃತ್ವದಲ್ಲಿ ಒತ್ತಾಯಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ, ಕಾರ್ಯಕಾರಿ ಮಂಡಳಿಯ ಎಸ್.ಜಿ. ಅರಗಂಜಿ, ಎಂ.ಎಂ. ಹಳ್ಳಿ, ಲೋಕೇಶ ಕೆ.ಎಂ., ಸಾವಿತ್ರಿ ಪೊಲೀಸ್ಗೌಡ್ರ, ಆರ್.ಜಿ. ಕೊಡ್ಲಿ, ಡಿ.ಎಂ. ನರಗುಂದ, ಎಸ್.ಎಂ. ಹಳೇಮನಿ, ಪಿ.ಎಸ್. ನರೇಗಲ್ಲ, ಎಂಡಿ ಪಾಟೀಲ ಇತರರು ಇದ್ದರು.
---