ವಕೀಲರ ಸಂಘದ ತಾಲೂಕು ಅಧ್ಯಕ್ಷರಾಗಿ ಡಿ.ಎ.ವಾಸು ಆಯ್ಕೆ

IMG-20230618-WA0086
ತಾಲೂಕು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿ ದೇವರಾಜ್ ಕುಮಾರ್.ಟಿ ಗೆಲುವನ್ನು ಘೋಷಿಸಿ ಅಭಿನಂದಿಸಿದರು. ವಾಸು.ಡಿ.ಎ, ರಮೇಶ್.ಡಿ.ಸಿ, ರಾಘವೇಂದ್ರ. ಸಿ.ಎನ್, ಶಿವಪ್ರಸಾದ್, ಕೆ.ಎನ್.ಕುಮಾರಸ್ವಾಮಿ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ವಕೀಲರ ಸಂಘದ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ.ಎ.ವಾಸು, ಕಾರ್ಯದರ್ಶಿಯಾಗಿ ಸಿ.ಎನ್.ರಾಘವೇಂದ್ರ ಆಯ್ಕೆಯಾದರು.

2023-24 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆಗೆ ಶನಿವಾರ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಎ.ವಾಸು ತಮ್ಮ ಪತ್ರಿಸ್ಪರ್ಧಿ ಧರ್ಮಪ್ಪ ವಿರುದ್ಧ ಗೆಲುವು ಸಾಧಿಸಿದರು. ಉಳಿದಂತೆ ಉಪಾಧ್ಯಕ್ಷರಾಗಿ ಡಿ.ಸಿ.ರಮೇಶ್, ಕಾರ್ಯದರ್ಶಿಯಾಗಿ ಸಿ.ಎನ್.ರಾಘವೇಂದ್ರ, ಖಜಾಂಚಿಯಾಗಿ ಕೆ.ಜಿ.ಶಿವಪ್ರಸಾದ್ ಗೆಲುವಿನ ನಗೆಬೀರಿದ್ದಾರೆ.

ನೂತನ ಅಧ್ಯಕ್ಷ ಡಿ.ಎ.ವಾಸು ಮಾತನಾಡಿ, ತಾಲೂಕಿನ ವಕೀಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯಗಳು ಬಾರದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತೇನೆ. ಇದು ನನ್ನ ಹಾಗೂ ನನ್ನ ವೃತ್ತಿ ಮಿತ್ರರ ಕರ್ತವ್ಯವೂ ಹೌದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net