ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

5srt-2
Published on

ಶಿರಹಟ್ಟಿ: ರಾಜ್ಯದಲ್ಲಿ ವಕೀಲರ ಮೇಲೆ ಪದೇ ಪದೆ ಹಲ್ಲೆಗಳು ನಡೆಯುತ್ತಿದ್ದು, ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಶಿರಹಟ್ಟಿ ವಕೀಲರ ಸಂಘದಿಂದ ಶುಕ್ರವಾರ ಶಿರಸ್ತೇದಾರ್ ಕೆ.ಎನ್. ದೊಡ್ಡಮನಿ ಮನವಿ ಸಲ್ಲಿಸಲಾಯಿತು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ವೈ. ಗೊಬ್ಬರಗುಂಪಿ ಮಾತನಾಡಿ, ಕಳೆದ ತಿಂಗಳು ತೆಲಂಗಾಣ ರಾಜ್ಯದಲ್ಲಿ ವಕೀಲ ದಂಪತಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಹೊಸಪೇಟೆಯ ನ್ಯಾಯಾಲಯದ ಆವರಣದಲ್ಲೇ ವಕೀಲ ತಾರಿಹಳ್ಳಿ ವೆಂಕಟೇಶ ಎಂಬುವರನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಖಂಡನೀಯ ಎಂದರು.

ಎ.ಎ. ಬೇವಿನಗಿಡದ, ಮಹೇಶ ದಾನಪ್ಪಗೌಡ್ರ, ಆರ್.ಎಂ. ಪೂಜಾರ, ಅನೀಲ ಮಾನೆ, ಎಂ.ಎಸ್. ಪವಾಡಶೆಟ್ಟರ, ಎಸ್.ಕೆ. ಪುರ್ತಗೇರಿ, ಎಸ್.ಎಸ್. ಪಾಟೀಲ. ಸಿ.ಎಲ್. ಜಾಧವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net