

ರಾಯಬಾಗ: ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಭವನ, ಇ-ಲೈಬ್ರರಿ ಮತ್ತು ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕಾಗಿ ಇಲಾಖೆ ಅಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಹಣಕಾಸು ಅನುಮೋದನೆ ದೊರಕಿಸಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಪಟ್ಟಣದ ವಕೀಲರ ಸಂಘಕ್ಕೆ ಬುಧವಾರ ಭೇಟಿ ನೀಡಿ ವಕೀಲರಿಂದ ಮನವಿ ಪತ್ರ ಸ್ವೀಕರಿಸಿ ಅವರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ ಮಾತನಾಡಿ, ರಾಯಬಾಗ ವಕೀಲರ ಸಂಘದಲ್ಲಿ 400 ವಕೀಲರಿದ್ದು, ವಕೀಲರ ಭವನ, ಇ-ಲೈಬ್ರರಿ ಮತ್ತು ಉಪಾಹಾರ ಗೃಹದ ಅವಶ್ಯಕತೆ ಇದೆ. ಸಚಿವರು ಶೀಘ್ರ ಹಣಕಾಸಿಗೆ ಅನುಮೋದನೆ ಕೊಡಿಸಿ ಕಾಮಗಾರಿ ಪ್ರಾರಂಭಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಉಪಾಧ್ಯಕ್ಷ ಎಂ.ಎಂ.ಚಿಂಚಲಿಕರ, ಕಾರ್ಯದರ್ಶಿ ಆರ್.ಎಸ್.ಹೊಳೆಪ್ಪಗೋಳ, ಆರ್.ಎಸ್.ಶಿರಗಾಂವೆ, ಎ.ಬಿ.ಮಂಗಸೂಳೆ, ವಿ.ಜಿ.ಖವಟಕೊಪ್ಪ, ಎಸ್.ಕೆ.ರೆಂಟೆ, ಎಸ್.ಬಿ.ಹೋಳ್ಕರ, ವಿ.ಎ.ಮೋರೆ,
ಎಸ್.ಬಿ.ಪಾಟೀಲ, ಪಿ.ಎಂ.ದರೂರ, ಎಸ್.ಎಸ್. ನಾಯಿಕ, ಜಿ.ಎಸ್.ಕಿಚಡೆ, ಪಿ.ಆರ್.ಗುಡೊ್ಡೀೀಡಗಿ, ರಿಯಾಜ್ ಮುಲ್ಲಾ ಇತರರಿದ್ದರು.