ವಕೀಲನ ಮೇಲೆ ಹಲ್ಲೆಗೈದವರನ್ನು ಬಂಧಿಸಿ

09 TT H 01
ತೀರ್ಥಹಳ್ಳಿಯಲ್ಲಿ ವಕೀಲ ಮಧುಕರ್ ಮಯ್ಯ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ರಂಜಿತ್ ಅವರಿಗೆ ಮನವಿ ಸಲ್ಲಿಸಿದರು. ಎಂ.ರಮೇಶ್, ಪ್ರಕಾಶ್, ಆದರ್ಶ, ಹರೀಶ್, ಟಿ.ಎಲ್. ಮಂಜುನಾಥ್, ಸ್ವಪ್ನಾ ಮಂಜುನಾಥ್ ಇತರರಿದ್ದರು.
Published on

ತೀರ್ಥಹಳ್ಳಿಯಲ್ಲಿ ಕೋರ್ಟ್ ಕಲಾಪ ಬಹಿಷ್ಕಾರ ನ್ಯಾಯವಾದಿಗಳ ಪ್ರತಿಭಟನೆ ವಿಜಯವಾಣಿ ಸುದ್ದಿಜಾಲ ತೀರ್ಥಹಳ್ಳಿ ವಕೀಲ ಮಧುಕರ್ ಮಯ್ಯ ಅವರ ಮೇಲೆ ಕಳೆದ ಶುಕ್ರವಾರ ನಡೆದ ಹಲ್ಲೆ ಘಟನೆ ಖಂಡಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಸೋಮವಾರ ಕೊರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಯುವ ವಕೀಲ ಮಧುಕರ್ ಮಯ್ಯ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಆರೋಪಿಗಳನ್ನ ಕೂಡಲೇ ಬಂಧಿಸುವುದಾಗಿ ಭರವಸೆ ನೀಡಿದ್ದ ಪೊಲೀಸರು ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಆದ್ದರಿಂದ ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲೂಕು ಸಂಘದ ಅಧ್ಯಕ್ಷ ಎಂ.ರಮೇಶ್ ಆಗ್ರಹಿಸಿದರು.

ಕಳೆದ ಶುಕ್ರವಾರ ಪಟ್ಟಣದ ಸೀಬಿನಕೆರೆ ಬಡಾವಣೆಯಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಆಗಮಿಸಿದ ಮೂವರು ವ್ಯಕ್ತಿಗಳು ಮಧುಕರ್ ಮಯ್ಯ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಘಟನೆಗೆ ಸ್ಪಷ್ಟ ಕಾರಣ ದೊರೆತಿಲ್ಲ. ಆದರೂ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಎಸ್.ರಂಜಿತ್ ಅವರಿಗೆ, ನಂತರ ಡಿವೈಎಸ್‌ಪಿಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಚಕೋಡುಬೈಲು ಪ್ರಕಾಶ್, ಕಾರ್ಯದರ್ಶಿ ಆದರ್ಶ, ಖಜಾಂಚಿ ಹರೀಶ್, ಸದಸ್ಯರಾದ ಟಿ.ಎಲ್. ಮಂಜುನಾಥ್, ಸಂಜಯ್‌ಕುಮಾರ್, ಅರುಣ, ಮಹೇಂದ್ರ, ಸ್ವಪ್ನಾ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net