ವಕೀಲ ವೃತ್ತಿಗಿದೆ ಹೆಚ್ಚಿನ ಗೌರವ

25-9
ರಾಯಬಾಗ ವಕೀಲ ಸಂಘದಿಂದ ಹಿರಿಯ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಅವರನ್ನು ಸತ್ಕರಿಸಲಾಯಿತು. ಆರ್.ಎಚ್.ಗೊಂಡೆ, ಎಂ.ಎಂ.ಚಿಂಚಲಿಕರ, ಬಿ.ಎನ್.ಬಂಡಗಾರ, ಆರ್.ಎಸ್.ಶಿರಗಾಂವೆ ಇತರರಿದ್ದರು.
Published on

ರಾಯಬಾಗ, ಬೆಳಗಾವಿ: ವಕೀಲ ವೃತ್ತಿ ಅತ್ಯಂತ ಗೌರವಯುತವಾದದ್ದು. ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದ ಹೆಚ್ಚಿನ ನಾಯಕರು ವಕೀಲ ವೃತ್ತಿಯಲ್ಲಿದ್ದವರು ಎಂದು ಹಿರಿಯ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ತಿಳಿಸಿದರು. ಪಟ್ಟಣದ ವಕೀಲರ ಸಂಘದಿಂದ ಶುಕ್ರವಾರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲ ಸ್ಥಾನ ಮರೆಯಬಾರದು ಎಂದರು.

ಶಂಭು ಕಲ್ಲೋಳಿಕರ ಅವರನ್ನು ವಕೀಲ ಸಂಘದಿಂದ ಸತ್ಕರಿಸಲಾಯಿತು. ವಕೀಲ ಬಿ.ಎನ್.ಬಂಡಗಾರ ಮಾತನಾಡಿದರು. ಆರ್.ಎಚ್.ಗೊಂಡೆ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ.ಚಿಂಚಲಿಕರ, ಆರ್.ಎಸ್.ಹೊಳೆಪ್ಪಗೋಳ, ಆರ್.ಎಸ್.ಶಿರಗಾಂವೆ, ಬಿ.ಎನ್.ಬಂಡಗಾರ, ಎಸ್.ಕೆ.ರೆಂಟೆ, ಎಸ್.ಬಿ.ಪಾಟೀಲ, ಜಿ.ಎಸ್.ಪವಾರ, ಎ.ಬಿ.ಮಂಗಸೂಳಿ, ಬಿ.ಆರ್.ಪಡಲಾಳೆ, ವಿ.ಎ.ಮೊರೆ, ಎಂ.ಕೆ.ಸಣ್ಣಕ್ಕಿ, ಎಲ್.ಆರ್.ಪಡತರೆ, ಪಿ.ಎಂ.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net