ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಯಾಗಲಿ

08Kush01 (1)
ಕುಶಾಲನಗರದ ಕೋರ್ಟ್ ಸಮೀಪ ವಕೀಲರು ಮಾನವ ಸರಪಳಿ ರಚಿಸಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿದರು. ಆರ್.ಕೆ.ನಾಗೇಂದ್ರ ಬಾಬು, ಕೆ.ಬಿ.ಮೋಹನ್, ವೆಂಕಟರಮಣ ಭಟ್, ಶಿವಮೂರ್ತಿ, ಎಸ್.ಕೆ.ಮಂಜುನಾಥ್, ಬಿ.ಎನ್.ಸಂತೋಷ್, ಜೆ.ಜೆ.ನವೀನ್, ವಿ.ಆರ್.ನಂದ ಇದ್ದರು.
Published on

ಕುಶಾಲನಗರ: ರಾಜ್ಯದಲ್ಲಿ ವಕೀಲರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಯಾಗಬೇಕು ಎಂದು ಆಗ್ರಹಿಸಿ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಾನವ ಸರಪಳಿ ರಚಿಸಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ನ್ಯಾಯಾಲಯ ಸಮೀಪ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ಜಮಾವಣೆಗೊಂಡ ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯ ಕೊಡಿಸುವ ವಕೀಲ ಸಮುದಾಯದ ರಕ್ಷಣೆ ಸರ್ಕಾರದ ಹೊಣೆ ಎಂದರು.

ಕಲಬುರಗಿಯ ಕೋರ್ಟ್ ಆವರಣದಲ್ಲಿ ವಕೀಲ ಹಿರಣ್ಣಗೌಡ ಪಾಟೀಲ್ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಹೀನ ಕೃತ್ಯ ಖಂಡನೀಯ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಆಗುವಂತೆ. ಸಂರಕ್ಷಣಾ ಕಾಯ್ದೆ ಜಾರಿ ಸಂಬಂಧ ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ಕಾನೂನು ಮಂತ್ರಿಗಳು ಕ್ರಮ ವಹಿಸಬೇಕು ಎಂದು ನಾಗೇಂದ್ರ ಬಾಬು ಒತ್ತಾಯಿಸಿದರು.

ಬಳಿಕ ನ್ಯಾಯಾಲಯ ಕಲಾಪದಿಂದ ಸೂರ ಉಳಿದರು. ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಉಪಾಧ್ಯಕ್ಷ ವೆಂಕಟರಮಣ ಭಟ್, ವಕೀಲರಾದ ಶಿವಮೂರ್ತಿ, ಎಸ್.ಕೆ.ಮಂಜುನಾಥ್, ಬಿ.ಎನ್.ಸಂತೋಷ್, ಜೆ.ಜೆ.ನವೀನ್, ವಿ.ಆರ್.ನಂದ, ಕೆ.ಎ.ವೇದಾ, ಎಂ.ಜೆ.ರೂಪಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net