ವಕಬೋರ್ಡ್ ಸಂಪೂರ್ಣ ರದ್ದು ಮಾಡಲಿ

3T34Gx5n_400x400
ನಾರಾಯಣಾಸಾ ಭಾಂಡಗೆ
Published on

ಬಾಗಲಕೋಟೆ: ಬರುವ ಚಳಿಗಾಲ ಅಽವೇಶನದಲ್ಲಿ ವಕಬೋರ್ಡ್ಗೆ ತಿದ್ದುಪಡಿ ತರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ನಾನು ಬರೀ ತಿದ್ದುಪಡಿಯಲ್ಲ, ಅದನ್ನು ಸಂಪೂರ್ಣ ರದ್ದು ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಾಸಾ ಭಾಂಡಗೆ ಹೇಳಿದ್ದಾರೆ.

ಬಾಗಲಕೋಟೆಯ ತಮ್ಮ ನಿವಾಸದಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳ ಜೊತೆ ಮಾತನಾಡಿದ ಭಾಂಡಗೆ, ದೇಶದ ತುಂಬ ವಕಬೋರ್ಡ್ ಇದು ನಮ್ಮ ಆಸ್ತಿ ಎಂದು ನೋಟಿಸ್ ಕೊಡಲು ಆರಂಭಿಸಿದೆ. ಇದು ಬರೀ ವಿಜಯಪುರದಲ್ಲಿ ತಲೆ ಎತ್ತಿರುವ ಸಮಸ್ಯೆ ಎಂದು ಭಾವಿಸಬೇಡಿ ಎಂದು ತಿಳಿಸಿದರು.

ಈ ದೇಶದಲ್ಲಿ ವಕಬೋರ್ಡ್ ಅವಶ್ಯಕತೆಯೇ ಇಲ್ಲ. ಅವರಿಗೆ ಮಾತ್ರ ಈ ವಿಶೇಷವಾದ ಸೌಲಭ್ಯ ಏಕೆ? ಇವರು ಎಲ್ಲಾದರೂ ಹೋಗಿ ಇದು ನಮ್ಮ ಆಸ್ತಿ ಎಂದು ಚೀಟಿ ಹಚ್ಚಿದರೆ ಅದು ಅವರ ಆಸ್ತಿನಾ ? ಈಗ ರೈತರ ಹೊಲಗಳಿಗೆ ಶುರು ಹಚ್ಚಿದ್ದಾರೆ. ಅಜ್ಜ, ಮುತ್ತಜ್ಜನ ಕಾಲದಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನುಗಳು ವಕಬೋರ್ಡ್ನದ್ದು ಎಂದು ಹೇಗೆ ಹೇಳುತ್ತಾರೆ? ಆ ಜಮೀರ್ ಅಹ್ಮದ್ ವಿಜಯಪುರಕ್ಕೆ ಹೋಗಿ ಬಂದ ಬಳಿಕ ಇದು ಚಾಲು ಆಗಿದೆ. ಇದೆಲ್ಲ ಅವನದ್ದೆ ಉಪದ್ಯಾಪಿತನ. ಅವನ ಭಾಷೆ ನೋಡಿದರೆ ಯಾವತ್ತೂ ಸರಳ ಭಾಷೆಯಲ್ಲಿ ಮಾತನಾಡಲ್ಲ. ನಾಲಿಗೆ ಬಿಗಿಹಿಡಿದುಕೊಂಡು ಹಿಂದುಗಳ ಮೇಲೆ ಕೆಂಡಕಾರುತ್ತಾನೆ. ಜಮೀರ್ ಅತ್ಯಂತ ಕೋಮುವಾದಿ. ಕಾಂಗ್ರೆಸ್ ನವರು ಅವನನ್ನು ನಿಯಂತ್ರಣ ಮಾಡಬೇಕೋ ಬೇಡವೋ ಎಂದು ಜಮೀರ್ ವಿರುದ್ಧ ಏಕವಚನದಲ್ಲೆ ಹರಿಹಾಯ್ದರು.

ವಕಬೋರ್ಡ್ಗೆ ಮನಮೋಹನ್ ಸಿಂಗ್ ಅವರು ಹೋಗುವಾಗಿ ಸಹಿ ಮಾಡಿ ಹೋಗಿದ್ದು ಇದು. ಅವರಿಗೆ ವಿಶೇಷವಾದ ಸೌಲಭ್ಯ ಕೊಟ್ಟರು. ಈಗ ಎಲ್ಲಿ ಹೋದಲ್ಲಿ ಈ ಜಾಗ ನಮ್ಮದೇ ಎಂದು ಹೇಳುತ್ತಿದ್ದಾರೆ. ಇದು ವಕಗೆ ಸಂಬಂಧಪಟ್ಟಿದ್ದು ಎಂದು ನೋಟಿಸ್ ಕೊಟ್ಟರೆ ೨೦ ದಿನಗಳಲ್ಲಿ ಖಾಲಿ ಮಾಡಬೇಕು ಎನ್ನುತ್ತಾರೆ. ಇವರೇನು ಕೋರ್ಟಾ? ಇದಕ್ಕೆ ಬೆಂಬಲ ಕೊಡುವ ಕೆಲ ನಾಲಾಯಕ ಹಿಂದೂಗಳು ಕೂಡ ಇದರಲ್ಲಿ ಇದ್ದಾರೆ. ಹೀಗಾಗಿ ನಾನು ವಕ್ಪಗೆ ತಿದ್ದುಪಡಿ ಬದಲಿಗೆ ಅದನ್ನು ಸಂಪೂರ್ಣ ತೆಗೆದುಹಾಕಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದರು.

ವಕಬೋರ್ಡ್ನ ಈ ನಡೆಯಿಂದ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ. ಗುಡು ಗುಂಡಾರಗಳೆಲ್ಲ ನಮ್ಮದೆ ಎನ್ನುತ್ತಾರೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ವಕಬೋರ್ಡ್ ಆಗಿದೆ. ಮುಸ್ಲಿಂರನ್ನು ಓಲೈಸುವ ಏಕೈಕ ಕಾರಣಕ್ಕೆ ಬೋರ್ಡ್ ಮಾಡಿಟ್ಟಿದ್ದಾರೆ. ನಾಳೆ ಅವರಿಗೂ ಇದು ಮುಳ್ಳಾಗುತ್ತದೆ. ಅವರು ಹೇಳಿದಂತೆ ಕೇಳಬೇಕು, ಕೋರ್ಟ್ಗೂ ಹೋಗುವಂತಿಲ್ಲ. ಇದೆಂಥ ಕಾನೂನು? ಯಾವುದನ್ನೂ ಚಾಲೆಂಜ್ ಮಾಡುವ ಆಗಿಲ್ಲವಂತೆ ಎಂದರು ಏನರ್ಥ ಎಂದು ಕೇಳಿದರು.

ಇವತ್ತು ವಿವಿಧೆಡೆ ಹಿಂದುಗಳ ಮೇಲೆ ಏನೇನು ಅನ್ಯಾಯ ಆಗುತ್ತದೆ. ಇದರ ಒಬ್ಬೆ ಒಬ್ಬ ಮುಸಲ್ಮಾನರಾದರೂ ಮಾತನಾಡಿದ್ದಾರಾ? ಮುಸ್ಲಿಂಗ ಬಗ್ಗೆ ಮಾತನಾಡಬೇಕು ಎಂದರೆ ಕೆಲವರಿಗೆ ನಾಲಿಗೆ ಬಿದ್ದು ಹೋಗುತ್ತದೆ. ವಕಬೋರ್ಡ್ ತೆಗೆದುಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೋರ್ಡ್ನಿಂದ ಕಾಂಗ್ರೆಸ್ ನವರ ಮನೆಗೂ ನೋಟಿಸ್ ಕೊಟ್ಟು, ಮನೆ ಖಾಲಿ ಮಾಡಿ ಎನ್ನುತ್ತಾರೆ. ಹೀಗಾಗಿ ದೇಶದ ಒಳತಿಗಾಗಿ ಬೋರ್ಡ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net