ವಂದೇ ಭಾರತ್ ರೈಲು ನಿಲುಗಡೆಯಾಗಲಿ

30ydg06
Published on


ಯಾದಗಿರಿ: ಕೇಂದ್ರ ಸಕರ್ಾರದ ಮಹತ್ವಾಕಾಂಕ್ಷೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇದೀಗ ಬೆಂಗಳೂರಿನಿಂದ ಹೈದರಾಬಾದ್ (ಕಾಚಿಗೂಡ)ಗೆ ಸಂಚಾರ ಆರಂಭಿಸಿದ್ದು, ಯಾದಗಿರಿಯಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಬುಧವಾರ ನಗರದ ರೈಲ್ವೆ ನಿಲ್ದಾಣದ ಮುಂದೆ ಧರಣಿ ನಡೆಸಿ, ಸ್ಟೇಷನ್ ಮ್ಯಾನೇಜರ್ಗೆ ಮನವಿ ಸಲ್ಲಿಸಿದರು.


ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಯಾದಗಿರಿ ಜಿಲ್ಲೆಯಾದ ನಂತರ ಇಲ್ಲಿನ ನಿಲ್ದಾಣದಲ್ಲಿ ಪ್ರಮುಖ ಎಕ್ಸ್ಪ್ರೆಸ್ ರೈಲುಗಳು ನಿಲುಗಡೆಯಾಗುತ್ತಿಲ್ಲ. ಇದರಿಂದ ಜಿಲ್ಲೆಯ ಜನತೆ ದೂರದ ಪ್ರಯಾಣಕ್ಕಾಗಿ ತೊಂದರೆ ಅನುಭವಿಸುವಂತಾಗಿದೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸಣ್ಣಪುಟ್ಟ ನಿಲ್ದಾಣದಲ್ಲೂ ಎಕ್ಸ್ಪ್ರೆಸ್ ರೈಲುಗಳು ನಿಲುಗಡೆಯಾಗುತ್ತವೆ. ಆದರೆ, ನಮ್ಮಲ್ಲಿ ಮಾತ್ರ ದೊಡ್ಡ ಮಟ್ಟದ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು.


ವಂದೇ ಭಾರತ್ ರೈಲು ಕೇಂದ್ರದ ಆತ್ಮನಿರ್ಭರ ಭಾರತ್ ಯೋಜನೆಯಡಿ ನಿಮರ್ಾಣಗೊಂಡಿದೆ. ಸಾಕಷ್ಟು ಸೌಲಭ್ಯ ಹೊಂದಿರುವ ಈ ರೈಲಿನಲ್ಲಿ ಜಿಲ್ಲೆಯ ಜನತೆ ಪ್ರಯಾಣಿಸುವ ಹಂಬಲದಲ್ಲಿದ್ದಾರೆ. ಅಲ್ಲದೆ, ಇದರಿಂದ ಸಮಯ ಸಹ ಉಳಿತಾಯವಾಗಲಿದ್ದು, ಅನೇಕ ಉದ್ಯಮಿಗಳಿಗೆ ಅನುಕೂಲವಾಗುತ್ತದೆ. ಆದರೆ, ಇಲಾಖೆ ಪಕ್ಕದ ಸೇಡಂ ಮತ್ತು ರಾಯಚೂರಿಗೆ ಈ ರೈಲು ಸ್ಟಾಪ್ ನೀಡಿದೆ. ಆದರೆ ಯಾದಗಿರಿ ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಇಲಾಖೆ ವಂದೇ ಭಾರತ್ ಜತೆಗೆ ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ನಿಲ್ದಾಣದ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರಾಧ್ಯಕ್ಷ ಅಂಬರೀಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ಸಾಹೇಬಗೌಡ ನಾಯಕ, ವಿಶ್ವರಾಜ್ ಹೋನಗೆರಾ, ಸಿದ್ದಪ್ಪ ಕೊಯಿಲೂರು, ಅಬ್ದುಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net