ವಂಚನೆ ಪ್ರಕರಣ ದಾಖಲಿಸಿ ತನಿಖೆ

crime-022204-16x9.jpg
Published on

ಚಿತ್ರದುರ್ಗ: ತುರುವನೂರು ರಸ್ತೆಯ ವಿನ್ನರ್ ಸೋಷಿಯಲ್ ಸರ್ವೀಸ್ ಟ್ರಸ್ಟ್ ಕಚೇರಿ ವಿರುದ್ಧ ದೂರು ನೀಡಿದ ಮೇರೆಗೆ ಮಂಗಳವಾರ ಡಿವೈಎಸ್ಪಿ ದಿನಕರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಪರಿಶೀಲಿಸಿತು.

ಟ್ರಸ್ಟ್‌ನ ಮುಖ್ಯಸ್ಥ ಕಿರಣ್ 50ಸಾವಿರ ರೂ.ಗೆ 5 ಲಕ್ಷ ಹಣ ನೀಡುವುದಾಗಿ, ಸೊನ್ನೆ ಬಡ್ಡಿ ದರದಲ್ಲಿ ಲಕ್ಷಾಂತರ ರೂ. ಸಾಲ ಕೊಡುವುದಾಗಿ ಹೇಳಿ ಕೆಲವರಿಂದ ಹಣ ಪಡೆದು ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ದಾಳಿ ನಡೆಸಿದರು.

ಪೊಲೀಸರು ಪರಿಶೀಲನೆ ವೇಳೆ ಟ್ರಸ್ಟ್ ನೋಂದಣಿ, ಸೂಕ್ತ ದಾಖಲೆ ಒದಗಿಸುವಂತೆ ತಾಕೀತು ಮಾಡಿದರು. ಆದರೆ, ಯಾವುದೇ ದಾಖಲೆ ನೀಡದ ಕಾರಣ ತನಿಖೆ ಮುಂದುವರೆದಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net