ವಿಕಸಿತ ಭಾರತ ಬಗ್ಗೆ ಉಪನ್ಯಾಸ

bharat
Published on

ಮಂಗಳೂರು: ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕದಿಂದ ವಿಕಸಿತ ಭಾರತ-2047 ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಅಂಕಣಕಾರ ಶ್ರೀಕಾಂತ ಶೆಟ್ಟಿ ಮಾತನಾಡಿ, ಭಾರತ ಸರ್ಕಾರ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳು ಇಂದು ಭಾರತವನ್ನು ಅಭಿವೃದ್ದಿಯ ಪಥದತ್ತ ಸಾಗಿಸುತ್ತಿದೆ ಹಾಗೂ ಈ ಯೋಜನೆಗಳು ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾಗಿವೆ. ಗಂಗಾ ನದಿಯನ್ನು ಶುದ್ದ ಗೊಳಿಸುವ ನಮಾಮಿಗಂಗೆ ಯೋಜನೆ, ಇದರಿಂದಾಗಿ ಇಂದು ಗಂಗೆಯಲ್ಲಿನ ಪಿಎಸ್ ಮಟ್ಟ ಇವತ್ತು 3 ಕ್ಕೆ ಇಳಿದಿದೆ. ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರದ ರಸ್ತೆ ಯೋಜನೆಗಳು ದೇಶದಾದ್ಯಂತ ಸಂಪರ್ಕ ಕ್ರಾಂತಿಯನ್ನು ಉಂಟುಮಾಡಿದೆ, ಭಾರತಿಯ ಸೇನೆಯ ಸರ್ಜಿಕಲ್‌ದಾಳಿ, ಇವ್ಯಾಕ್ಯುಯೇಷನ್‌ಗಳು ಭದ್ರತೆಯ ಹೊಸ ಸವಾಲುಗಳಿಗೆ ಉತ್ತರಗಳನ್ನು ನೀಡಿದೆ. ಭಾರತಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ ಯಶಸ್ಸುಗಳು ಕೂಡ ಜಗತ್ತು ಭಾರತದತ್ತ ತಿರುಗುವಂತೆ ಮಾಡಿದೆ. ಭಾರತ ಈ ರೀತಿ ಅನೇಕ ರಂಗದಲ್ಲಿ ಅಭಿವೃದ್ದಿಯನ್ನು ಸಾಧಿಸುತ್ತಿದ್ದು ಇದು ಜಗತ್ತಿನಲ್ಲಿ ಭಾರತ ಪ್ರಾಬಲ್ಯಸಾಧಿಸಬಾರದು ಭಾರತವು ಪ್ರೇರಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ, ಹೋರಾಟ ಕೇವಲ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ, ಅಭಿವೃದ್ದಿಗಾಗಿಯೂ ನಾವು ಹೋರಾಟದ ಮನೋಭಾವವನ್ನು ರೂಢಿಸಿಕೊಳ್ಳಬೇಕು, ಯುವಜನತೆ ತಮ್ಮ ಅಭ್ಯೂದಯದ ಜೊತೆಗೆ ದೇಶದ ಹಿತಕ್ಕಾಗಿ ಕೂಡ ಯೋಚಿಸುವದನ್ನು ಕಲಿಯಬಬೇಕು ಎಂದರು.

ಅಂತಮ ವರ್ಷದ ವಿದ್ಯಾರ್ಥಿಗಳು, ಅಧ್ಯಾಪಕರು ಉಪಸ್ಥಿತರಿದ್ದರು.

ಉಪನ್ಯಾಸಕ ನಾಯಕ್ ಚಿನ್ಮಯ್ ಸದಾನಂದ ಸ್ವಾಗತಿಸಿದರು, ಉಪನ್ಯಾಸಕಿ ಕುಮಾರಿ ದೃಷ್ಟಿ ವಿ ಬಾಳಿಗ ವಂದಿಸಿದರು, ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net