ಕೊಪ್ಪಳ: ತಾಲೂಕಿನ ಇರಕಲ್ಲಗಡಾ ಕೋಟೆ ವೀಕ್ಷಣೆ ಮತ್ತು ಚರಿತ್ರೆ ಮನನ ಚಾರಣ ಕಾರ್ಯಕ್ರಮವನ್ನು ಕೊಪ್ಪಳ ಚಾರಣ ಬಳಗ ಫೆ. 11ರಂದು ಆಯೋಜಿಸಿದೆ.
ಕೋಟೆಯ ಚರಿತ್ರೆ ಕುರಿತು ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕ ಮಂಜುನಾಥ ಕೀರ್ತಿಗೌಡ ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸಕರು, ಸಂಶೋಧಕರು, ವೈದ್ಯರು, ಪತ್ರಕರ್ತರು, ವಿದ್ಯಾರ್ಥಿಗಳು, ಇತಿಹಾಸ ಪ್ರಿಯರು ಚಾರಣದಲ್ಲಿ ಭಾಗವಹಿಸಲಿದ್ದಾರೆ.
ಇರಕಲ್ಲಗಡಾ ಕೋಟೆ ಚಾರಣ 5ನೇ ಚಾರಣವಾಗಿದ್ದು, ಈಗಾಗಲೇ ಕೊಪ್ಪಳ ಕೋಟೆ, ಮಳೆಮಲ್ಲೇಶ್ವರ ಪರ್ವತ, ಬಹದ್ದೂರಬಂಡಿ ಕೋಟೆ, ಇಟಗಿ ಮಹಾದೇವ ದೇವಾಲಾಯ ಚಾರಣಗಳನ್ನು ಮಾಡಲಾಗಿದೆ. ಸದರಿ ಚಾರಣದಲ್ಲಿ ಆಸಕ್ತರು ಆಗಮಿಸಬಹುದು. ಹೆಚ್ಚಿನ ಮಾಹಿತಿಗೆ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಮೊ: 9448570340, ಡಾ.ವಿಜಯ ಸುಂಕದ ಮೊ: 9980661571ಸಂಪರ್ಕಿಸಲು ಪ್ರಕಟಣೆ ಕೋರಿದೆ.