ಲ್ಯಾಂಕೋ ದೇವಿಹಳ್ಳಿ ಟೋಲ್ ವಿರುದ್ಧ ಪ್ರತಿಭಟನೆ, ಮಾಜಿ ಯೋಧನಿಗೆ ಅಗೌರವ ತೋರಿದ ಆರೋಪ, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಆಕ್ರೋಶ

05 Nela Ph 02 Protest
Published on

ನೆಲಮಂಗಲ: ತಾಲೂಕಿನ ಕರೆಕಲ್ ಕ್ರಾಸ್ ಬಳಿಯ ಲ್ಯಾಂಕೋ (ಮಂಗಳೂರು ರಸ್ತೆಯಲ್ಲಿ) ದೇವಿಹಳ್ಳಿ ಟೋಲ್‌ನಲ್ಲಿ ನೌಕರನೊಬ್ಬ ವಾಜಿ ಯೋಧರಿಗೆ ಅಗೌರವ ತೋರಿದ ಎಂಬ ಕಾರಣಕ್ಕಾಗಿ ಅಖಿಲ ಕರ್ನಾಟಕ ವಾಜಿ ಸೈನಿಕ ಸಂದ ಪದಾಧಿಕಾರಿಗಳು ಟೋಲ್ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.

ವಾಜಿ ಸೈನಿಕ ಸಂಜೀವಯ್ಯ ಸೆ.3ರಂದು ಹಾಸನಕ್ಕೆ ತೆರಳಿದ್ದರು. ಬೆಂಗಳೂರಿಗೆ ಮರಳುವಾಗ ಲ್ಯಾಂಕೋ ದೇವಿಹಳ್ಳಿ ಟೋಲ್ ನೌಕರ ಗುರುತಿನ ಚೀಟಿ ಕೇಳಿದ್ದ. ಸಂಜೀವಯ್ಯ ಚೀಟಿ ತೋರಿಸಿದ್ದರು. ಅದರೂ, ಟೋಲ್ ನೌಕರ, ಗುರುತಿನ ಚೀಟಿ ಎಸೆದು, ಅವಾಚ್ಯವಾಗಿ ನಿಂದಿಸಿದ್ದ. ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರ ಸಂಘದವರು ಟೋಲ್ ಸಿಬ್ಬಂದಿ ವಿರುದ್ಧ ಪ್ರತಿಭಟನೆ ಮಾಡಿ, ಟೋಲ್ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಸಂದ ಅಧ್ಯಕ್ಷ ಡಾ.ಎನ್.ಕೆ. ಶಿವಣ್ಣ ವಾತನಾಡಿ, ವಾಜಿ ಸೈನಿಕ ಎಂದು ಹೇಳಿದ ನಂತರದಲ್ಲೂ ಟೋಲ್ ನೌಕರ ಆಗೌರವದಿಂದ ನಡೆದುಕೊಂಡ. ಆತನನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಉಚಿತ ಸಂಚಾರಕ್ಕೆ ಅವಕಾಶ ಇಲ್ಲ: ಮಾಜಿ ಯೋಧರಿಗೆ ಶುಲ್ಕ ಪಾವತಿಸದೆ ಟೋಲ್ ಪ್ಲಾಜಾಗಳನ್ನು ಹಾದು ಹೋಗಲು ಸರ್ಕಾರ ಅವಕಾಶ ನೀಡಿತ್ತು. ಆದರೆ, ಾಸ್ಟಾೃಗ್ ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ಈ ಅವಕಾಶ ರದ್ದುಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಡಾ. ಎನ್.ಕೆ. ಶಿವಣ್ಣ ಹೇಳಿದರು.

ಸಂದ ಉಪಾಧ್ಯಕ್ಷರಾದ ಕೆ.ರಮೇಶ್, ಮಹದೇವ್ ಅಣ್ಣಾ ಬನ್ನಕ್ಕಗೋಳ, ಸಂಟನಾ ಕಾರ್ಯದರ್ಶಿ ರಮೇಶ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ವೇಣು, ದಕ್ಷಿಣ ಭಾಗದ ಅಧ್ಯಕ್ಷ ಬಸವರಾಜು, ಉತ್ತರ ಭಾಗದ ಅಧ್ಯಕ್ಷ ಶಿವಕುವಾರ್, ನಿವೃತ್ತ ಯೋಧ ನರಸಿಂಹರಾಜು, ಯೋಧ ಜಯರಾಮ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net