ಲೋಪ ದೋಷಗಳನ್ನು ಸರಿಪಡಿಸಿ

shashidhar Kosambe
Published on

ಬಸವಕಲ್ಯಾಣ: ಇಲ್ಲಿಯ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮಾದರಿ ಮಕ್ಕಳ ಪೌಷ್ಟಿಕ ಪುನಶ್ಚೇತನ ಘಟಕಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಭೇಟಿ ನೀಡಿ ಪರಿಶೀಲಿಸಿ, ಮಕ್ಕಳ ವಾಡ್೯, ದಾಖಲಾತಿ, ಅಡುಗೆ ಕೋಣೆ, ಔಷಧ ಕೊಠಡಿ ವೀಕ್ಷಿಸಿದರು.
ಘಟಕದಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ದಾಖಲೆಯಲ್ಲಿ 14 ಮಕ್ಕಳು ಎನ್ನಲಾಗುತ್ತಿದೆ. ಆದರೆ ಒಂದು ಮಗು ಇಲ್ಲವಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಅಪರ್ಣ ಅವರನ್ನು ಪ್ರಶ್ನಿಸಿದರು. ಕೂಡಲೇ ಇಲ್ಲಿನ ಲೋಪಗಳನ್ನು ಸರಿಪಡಿಸಿ, ಚಿಕಿತ್ಸೆಗೆ ಪೂರಕ ವಾತಾವರಣ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. ಡಿಎಚ್ಒಗೆ ಕರೆ ಮಾತನಾಡಿ, ಅವ್ಯವಸ್ಥೆ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಖುದ್ದು ಭೇಟಿ ನೀಡಿ ಪರಿಶೀಲಿಸಿ ಎಂದು ಕೋಸಂಬೆ ತಿಳಿಸಿರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪುರೆ, ಮುಖ್ಯ ವೈದ್ಯಾಕಾರಿ ಡಾ.ಅಪರ್ಣ ಈರಣ್ಣ, ಶ್ರೀದೇವಿ, ಯಶೋಧಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net