ಲೋನ್ ಕೊಡಿಸುವುದಾಗಿ ನಂಬಿಸಿ ಕಲಬುರಗಿ ವ್ಯಾಪಾರಿಗೆ 23.89 ಲಕ್ಷ ರೂಪಾಯಿ ಪಡೆದು ವಂಚನೆ

Crime Logo
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ವ್ಯಾಪಾರ ವೃದ್ಧಿಸಲು ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಬ್ಯಾಂಕಿನಿAದ ೧೫ ಕೋಟಿ ರೂ. ಲೋನ್ ಕೊಡಿಸುವುದಾಗಿ ನಂಬಿಸಿ ಮುಂಬಯಿ ಮೂಲದ ನಾಲ್ವರು ವ್ಯಕ್ತಿಗಳು ಸೇರಿಕೊಂಡು ಕಲಬುರಗಿಯ ಇಬ್ಬರು ವ್ಯಾಪಾರಿಗಳಿಗೆ ಮೋಸ ಮಾಡಿ ೨೩.೮೯ ಲಕ್ಷ ರೂ. ಪಡೆದುಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಅರೋಮಾ ಸಾಗರ ಎಲೆಕ್ಟಿçಲ್ ವ್ಯಾಪಾರ ಮಾಡಿಕೊಂಡಿರುವ  ಅಬ್ದುಲ್ ಜಬ್ಬಾರ ಬಾಸುಮಿಯಾ ಹಾಗೂ ಅವರ ಪಾಲುದಾರ ಮಹ್ಮದ ಹುಸೇನ್ ಜಾಕೀರ್ ಹುಸೇನ್ ಮೋಸ ಹೋದವರು.
ಅಬ್ದುಲ್ ಜಬ್ಬಾರ ಅವರು ತಮ್ಮ ಎಲೆಕ್ಟಿçಕ್ ವ್ಯಾಪಾರದ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಮಹ್ಮದ ಹುಸೇನ್‌ರನ್ನು ಪಾಲುದಾರರನ್ನಾಗಿ ಮಾಡಿಕೊಂಡಿದ್ದರು. ಇಬ್ಬರು ಸೇರಿ ಬಂಡವಾಳ ಹೂಡಲು ಸಮಸ್ಯೆಯಾಗಿದ್ದರಿಂದ ಬೇರೊಬ್ಬರ ಮೂಲಕ ಪರಿಚಯವಾಗಿದ್ದ ಮುಂಬಯಿ ಮೂಲದ  ಹಮೀದ್ ಹುಸೇನ್ ಸಿರಾಜ್, ಅಜಯ ಪಾಂಡೆ, ರಾಹುಲ್ ಮತ್ತು  ಮಹ್ಮದ್ ಸೂಫಿಯಾನ್ ಎಂಬುವರು ಹಣ ಪಡೆದುಕೊಂಡು ಸಾಲ ಕೊಡಿಸದೆ ಮೋಸ ಮಾಡಿದವರು. ಈ ಕುರಿತು ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅದನ್ನು ತನಿಖೆಗಾಗಿ ಚೌಕ್ ಠಾಣೆಗೆ ವರ್ಗಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net