

ವಿಜಯಪುರ: ವಿವಿಧ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿದ ಅವಳಿ ಜಿಲ್ಲೆಗಳ ಹಲವು ಪಂಚಾಯತಿ ಸದಸ್ಯರು ಡಾ. ಬಿ ಆರ್ ಅಂಬೇಡ್ಕರ್ ಸರ್ಕಲ್‌ನಿಂದ ಡಿಸಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿದ್ರು. ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಲೋಣಿ ನೇತ್ರತ್ವದಲ್ಲಿ ವಿಜಯಪುರ ಡಿಸಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪಂಚಾಯತಿ ಸದಸ್ಯರ ಗೌರವ ಧನವನ್ನು 10ಸಾವಿರಕ್ಕೆ ಏರಿಸಬೇಕು. ಉಚಿತ ಬಸ್ ಪಾಸ್ ಒದಗಿಸಬೇಕು. ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಸದಸ್ಯರ ಕುಟುಂಬಗಳಿಗೆ ವಿಮೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ಚುನಾಯಿತ ಸದಸ್ಯರಿಗೆ ಈ ಸೌಲಭ್ಯಗಳು ಸಿಗಬೇಕು ಎಂದು ಮನವಿ ಸಲ್ಲಿಲಾಯಿತು. ಲೋಣಿ ಹಾಗೂ ವಿವಿಧ ಪಂಚಾಯತಿ ಸದಸ್ಯರು ಸೇರಿ ವಿಜಯಪುರ ಡಿಸಿ ಸುನೀಲಕುಮಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು.