ಲೋಕ್ ಅದಾಲತ್‌ನಲ್ಲಿ ೧,೯೫೨ ಪ್ರಕರಣ ಇತ್ಯರ್ಥ

8Rayabag1
Published on

ರಾಯಬಾಗ: ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಸಂಧಾನ ಮೂಲಕ ಬಗೆಹರಿಸಿಕೊಂಡು ನೆಮ್ಮದಿ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸಿರೊಟ್ಟಿ ಹೇಳಿದರು.

ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟೀಯ ಲೋಕ್ ಅದಾಲತ್‌ನಲ್ಲಿ ಮಾತನಾಡಿ, ಲೋಕ ಅದಾಲತ್‌ನಲ್ಲಿ ಒಟ್ಟು ೧,೯೫೨ ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಜತೆಗೆ ಎರಡು ಅಗಲಿದ ಜೋಡಿಗಳನ್ನು ಒಂದು ಮಾಡಲಾಗಿದೆ ಎಂದು ತಿಳಿಸಿದರು.

ಕಾನೂನು ಸೇವಾ ಪ್ರಾಽಕಾರದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಮಹಾವೀರ ಗಂಡವ್ವಗೋಳ, ಹನುಮಂತ ಅಚಮಟ್ಟಿ, ಎಸ್.ಬಿ. ಬಿರಾದಾರಪಾಟೀಲ, ಬಿ.ಕೆ.ಶಿಂಗಾಡೆ, ಯು.ಎನ್. ಉಮ್ರಾಣಿ, ಎ.ಬಿ.ಮಂಗಸೂಳೆ, ಎಸ್.ಕೆ.ರೆಂಟೆ, ಜಿ.ಎಸ್.ಪವಾರ, ಬಿ.ಬಿ.ಈಟಿ, ಎನ್.ಎಸ್.ಒಡೆಯರ, ಬಿ.ಆರ್.ಪಡಲಾಳೆ, ಅಜಿತ್ ಖಿಚಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net