ಲೋಕಾಯುಕ್ತ ಬಲೆಗೆ ಬಿದ್ದ ನಾಡ ತಹಸೀಲ್ದಾರ್

15BK5
Published on

ಬಸವಕಲ್ಯಾಣ: ಜಮೀನಿನ ಮ್ಯುಟೇಷನ್ ಹಾಗೂ ಪಹಣಿಗೆ ಸಂಬಂಧಿಸಿದ ಕೆಲಸ ಮಾಡಿ ಕೊಡಲು ಹಣದ ಬೇಡಿಕೆ ಇಟ್ಟ ಕೋಹಿನೂರ ನಾಡ ತಹಸೀಲ್ದಾರ್ ಶಿವಾನಂದ ಬಿರಾದಾರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ನಗರದಲ್ಲಿ ಜರುಗಿದೆ.

ತಾಲೂಕಿನ ಉಜಳಂಬ ಗ್ರಾಮದ ಸುಧೀರ ದೊಂಬೆ ಅವರ ಜಮೀನಿಗೆ ಸಂಬಂಧಿಸಿದ ಮ್ಯುಟೇಷನ್ ಹಾಗೂ ಪಹಣಿಗಾಗಿ ಕೆಲಸ ಮಾಡಿ ಕೊಡಲು ಶಿವಾನಂದ ಬಿರಾದಾರ ೨.೫೦ ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಸುಧೀರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಶುಕ್ರವಾರ ನಗರದ ನಾರಾಯಣಪುರ ಕ್ರಾಸ್ ಬಳಿ ಮುಂಗಡವಾಗಿ ೧ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಡಿವೈಎಸ್‌ಪಿ ಎನ್‌ಎಂ ಓಲೇಕಾರ ನೇತೃತ್ವದ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶಿವಾನಂದ ಬಿರಾದಾರ ಅವರನ್ನು ನಾರಾಯಣಪುರ ಕ್ರಾಸ್ ಬಳಿ ಬಂಧಿಸಿ, ತಹಸಿಲ್ ಕಚೇರಿಗೆ ಕರೆತಂದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದರು. ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪಿಎಸ್‌ಐ ಅಂಬರೀಶ ವಾಗ್ಮೋಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net