ಲೋಕಾಯುಕ್ತ ಬಲೆಗೆ ಪಶುವೈದ್ಯಾಧಿಕಾರಿ

CTD 0001
Published on

ಚಿತ್ರದುರ್ಗ:ಮೃತ ಹಸುವಿನ ಪೋಸ್ಟ್ ಮಾರ್ಟ್‌ಂ ರಿಪೋರ್ಟ್ ಕೊಡಲು 7 ಸಾವಿರ ರೂ.ಲಂಚ ಕೊಡುವಂತೆ ಜಾನುವಾರು ಮಾಲೀಕನಿಗೆ ಬೇಡಿಕೆ ಇಟ್ಟಿದ್ದ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಪಶುವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಕಾಗಳಗೆರೆಯ ಎಸ್.ಸ್ವಾಮಿ ಅವರಿಂದ,ಪಶು ಆಸ್ಪತ್ರೆಯಲ್ಲಿ ಆರು ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದಾಗ ಡಿವೈಎಸ್‌ಪಿ ಮೃತ್ಯಂಜಯ ಅವರ ನೇತೃತ್ವದ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಕೃಷಿಕ ಸ್ವಾಮಿ ಅವರಿಗೆ ಸೇರಿದ್ದ ಒಂದು ಹಸು ಮೇ 19ರಂದು ಮೃತಪಟ್ಟಿತ್ತು. ಇದರ ವಿಮಾ ಪರಿಹಾರಕ್ಕಾಗಿ ಮರಣೋತ್ತರ ವರದಿಯನ್ನು ವೈ ದ್ಯನ ಬಳಿ ಕೇಳಿದ್ದರು. ಆಗ ಏಳು ಸಾವಿರ ರೂ.ಕೊಡುವಂತೆ ಒತ್ತಾಯಿಸಿದ್ದ ವೈದ್ಯ ಸ್ವಾಮಿಗೆ ಡಿಮ್ಯಾಂಡ್ ಮಾಡಿದ್ದು,ಒಂದು ಸಾವಿರ ರೂ. ಮೊದಲೇ ಪಡೆದಿದ್ದ.

ಉಳಿದ ಹಣವನ್ನು ವರದಿ ಪಡೆಯುವ ವೇಳೆ ತಂದು ಕೊಡುವಂತೆ ತಿಳಿಸಿದ್ದು,ಹಣ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ್ದ ಪೊಲೀಸರು ಆರೋಪಿಯ ನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್‌ಪಿ ವಾಸುದೇವರಾಮ ಅವರ ಮಾರ್ಗದದರ್ಶನದಲ್ಲಿ ದಾಳಿ ನಡೆದಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಪಿಐ ಬಿ.ಕೆ.ಲತಾ ಅವರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net