ಲೋಕಾಯುಕ್ತ ಬಲೆಗೆ ನಿಗಮದ ನೌಕರ

DSC_0425-006
Published on

ಚಿತ್ರದುರ್ಗ: ನೇರ ಸಾಲ ಮಂಜೂರಾತಿಗೆಂದು ಫಲಾನುಭವಿಗಳಿಂದ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ,ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ನೌಕರ ಮಲ್ಲೇಶ್ ಎಂಬಾತನನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ನಗರದ ಎಸ್.ರಾಕೇಶ್ ಹಾಗೂ ಅವರ ತಂಗಿ ಲತಾ ಅವರು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದು,ಕಳೆದ ಮಾರ್ಚ್‌ನಲ್ಲಿ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆದಿತ್ತು. ಆಯ್ಕೆಯಾದವರಲ್ಲಿ ರಾಕೇಶ್ ಮತ್ತು ಲತಾ ಕೂಡ ಇದ್ದರು.
ಅವರಿಗೆ ಸಾಲ ಮಂಜೂರು ಮಾಡಿಸಲು ಅವರಿಂದ ತಲಾ 4500 ರೂ.ಗಳಂತೆ 9 ಸಾವಿರ ರೂ.ಡಿಮ್ಯಾಂಡ್ ಮಾಡಿ ಕಚೇರಿಯಲ್ಲಿ ಹ ಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು,ಆರೋಪಿ ಕೇಸ್‌ವರ್ಕರ್ ಮಲ್ಲೇಶ್‌ನನ್ನು ಬಂಧಿಸಿ,ಹಣ ವಶಪಡಿಸಿ ಕೊಂಡಿದ್ದಾರೆ.
ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎನ್.ಮೃತ್ಯುಂಜಯ ಅವರ ತಂಡ ದಾ ಳಿ ನಡೆಸಿದೆ. ಪ್ರಕರಣ ದಾಖಲಿಸಿರುವ ಪಿಐ ವೈ.ಎನ್.ಶಿಲ್ಪಾ ಅವರು ತನಿಖೆ ಮುಂದುವರಿಸಿದ್ದಾರೆ. ಪಿಐಗಳಾದ ಬಿ.ಕೆ.ಲತಾ,ಆರ್.ವಸಂ ತಕುಮಾರ್,ಸಿಬ್ಬಂದಿ ಜಿ.ಎಂ.ತಿಪ್ಪೇಸ್ವಾಮಿ,ಎಚ್.ಶ್ರೀನಿವಾಸ್,ಎಸ್.ಆರ್.ಪುಷ್ಪಾ,ಎಲ್.ಜಿ.ಸತೀಶ್,ಜಿ.ಎನ್.ಸಂತೋಷ್ ಕುಮಾರ್, ಎಂ.ವೀರೇಶ್,ಎಸ್.ರಾಜೇಶ್,ಆರ್. ವೆಂಕಟೇಶ್‌ಕುಮಾರ್,ಟಿ.ವಿ.ಸಂತೋಷ್,ಡಿ.ಮಾರುತಿ ಹಾಗೂ ಎನ್.ಎಲ್.ಶ್ರೀಪತಿ ದಾಳಿಯ ಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net