ಲೋಕಾಯುಕ್ತ ಪೊಲೀಸರ ಬಲೆಗೆ ಮೆಸ್ಕಾಂ ಜೆಇ

KDR engi
Published on

ಕಡೂರು: ಗಂಗಾ ಕಲ್ಯಾಣ ಯೋಜನೆಯ ಬಿಲ್‌ಗಳನ್ನು ಅನುಮೋದಿಸಲು ಶುಕ್ರವಾರ ವಿದ್ಯುತ್ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಮತಿಘಟ್ಟ ಮೆಸ್ಕಾಂ ಉಪವಿಭಾಗದ ಕಿರಿಯ ಅಭಿಯಂತರ ಎಚ್.ಎಂ.ಪ್ರಶಾಂತ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮತಿಘಟ್ಟದ ವಿದ್ಯುತ್ ಗುತ್ತಿಗೆದಾರ ದೇವರಾಜ ಗಂಗಾಕಲ್ಯಾಣ ಯೋಜನೆಯ 4 ಬಿಲ್‌ಗಳನ್ನು ಅನುಮೋದಿಸುವಂತೆ ಕೋರಿದ್ದರು. ಈ ಸಂಬಂಧ 9 ಸಾವಿರ ರೂಪಾಯಿ ಲಂಚಕ್ಕೆ ಪ್ರಶಾಂತ್ ಬೇಡಿಕೆ ಇಟ್ಟಿದ್ದರು. ಈ ಕುರಿತು ದೇವರಾಜ ಲೋಕಾಯುಕ್ತ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಶುಕ್ರವಾರ ಮೆಸ್ಕಾಂ ಕಚೇರಿಯಲ್ಲಿ ಪ್ರಶಾಂತ್ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಮತ್ತು ತಂಡ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಎಚ್.ಎನ್.ಬಾಲು, ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net