

ಕಲಬುರಗಿ: ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಮಗ್ಗಿ ಅವರ ಕಲಬುರಗಿ ನಗರದ ಎಂ.ಜಿ.ನಗರದ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಸುಮಾರು 12.50 ಲಕ್ಷ ರೂ. ಮೌಲ್ಯದ ಕ್ಯಾಸಿನೊ ಕಾಯಿನ್‌ಗಳನ್ನು ಪತ್ತೆ ಮಾಡಿದ್ದಾರೆ.
ಎಂಬಿ ನಗರದ ಬಸವರಾಜ ಅವರ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳ ಪರಿಶೀಲಿಸುತ್ತಿದ್ದಾರೆ.
'ಮನೆಯ ಪರಿಶೀಲನೆಯ ವೇಳೆ ಸುಮಾರು 12.50 ಲಕ್ಷ ರೂ. ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾಗಿವೆ. ಕ್ಯಾಸಿನೊ ಸದಸ್ಯತ್ವದ ಕಾರ್ಡ್ ಕೂಡ ಸಿಕ್ಕಿದೆ' ಎಂದು ಮೂಲಗಳು ತಿಳಿಸಿವೆ.