

ಲೋಕೋಪಯೋಗಿ ಇಲಾಖೆಯ ಸಿವಿಲ್ ಗುತ್ತಿಗೆದಾರ ಪರವಾನಿಗೆ ಪ್ರಮಾಣಪತ್ರ ನೀಡಲು 3,500 ರೂ. ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ನಗರದ ಶಿವಪ್ರಸಾದ ಲಿಂಗಪ್ಪ ಹೊಟ್ಟಿನ ಎಂಬುವರು ಸಿವಿಲ್ ಕಾಂಟ್ರ‍್ಯಾಕ್ಟರ್ ಪರವಾನಿಗೆ ಪ್ರಮಾಣಪತ್ರಕ್ಕಾಗಿ ಲೋಕೋಪಯೋಗಿ ಇಲಾಖೆಯ ಧಾರವಾಡ ಅಽÃಕ್ಷಕ ಇಂಜಿನಿಯರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ರೇವಣ್ಣಸಿದ್ದಪ್ಪ ಗೌಡಣ್ಣವರ ೩,೫೦೦ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರ ಶಿವಪ್ರಸಾದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸ್ ಅಽÃಕ್ಷಕ ಸತೀಶ ಚಿಟಗುಪ್ಪಿ, ಉಪ ಅಽÃಕ್ಷಕರಾದ ಎಚ್.ಕೆ. ಪಠಾಣ, ವಿಜಯ ಬಿರಾದಾರ ನೇತೃತ್ವದಲ್ಲಿ ಠಾಣೆಯ ನಿರೀಕ್ಷಕ ಬಸವರಾಜ ಅವಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಹಾಂತೇಶ ಗೌಡಣ್ಣವರ ದೂರುದಾರರಿಂದ ೩೫೦೦ ರೂ. ಲಂಚ ಪಡೆಯುವ ವೇಳೆ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಽಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.