ಲೋಕಾಯುಕ್ತ ದಾಳಿ, ಆರ್‌ಟಿಒ ಸಿಬ್ಬಂದಿ ಸೆರೆ

Published on

ಬಳ್ಳಾರಿ : ಚಾಲನಾ ಪರವಾನಗಿ ನೀಡಲು ಒಂದು ಸಾವಿರ ರೂ. ಬೇಡಿಕೆ ಇಟ್ಟಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಾಗೇಶ್‌ ಕುಮಾರ್‌ ನನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ. 
ನಗರದ ಮೊಹಮದ್‌ ಪುರ್ಕಾನ್‌ ಚಾಲನಾ ಪರವಾನಿಗಯ ನವೀಕರಣಕ್ಕಾಗಿ ಅರ್ಜಿ ಹಾಕಿದ್ದರು. ಲಂಚದ ಹಣ ಪಡೆಯುವಾಗಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net