

ಹುಕ್ಕೇರಿ: ರಾಜ್ಯ ಲೋಕಾಯುಕ್ತ ಇಲಾಖೆ ನಿರ್ದೇಶನದ ಮೇರೆಗೆ ಹುಕ್ಕೇರಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಕೈಗೊಂಡಿದೆ ಎಂದು ಡಿವೈಎಸ್‌ಪಿ ಭರತ ರೆಡ್ಡಿ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿನ ತಹಸೀಲ್ದಾರ್ ಕಾರ್ಯಾಲಯಕ್ಕೆ ಸೋಮವಾರ ಅನಿರೀಕ್ಷಿತವಾಗಿ ಆಗಮಿಸಿದ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ತಂಡ ಕಂದಾಯ ಇಲಾಖೆಯ ಎಲ್ಲ ವಿಭಾಗಗಳಲ್ಲಿ ಕಡತ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ, ಕಡತಗಳ ವಿಲೇವಾರಿಗೆ ವಿಳಂಬ, ಸಾರ್ವಜನಿಕರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಸಿಕ್ಕಿವೆ ಎಂಬುದನ್ನು ಪರಿಶೀಲಿಸಿ ಮಾಹಿತಿ ಪಡೆದರು. ತಹಸೀಲ್ದಾರ್ ಕೊಠಡಿ ಮೇಲಂತಸ್ತಿಗೆ ಸ್ಥಳಾಂತರಿಸಿರುವುದರಿಂದ ಅಂಗವಿಕಲರಿಗೆ ಹಾಗೂ ವಯೋವೃದ್ಧರಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ತಹಸೀಲ್ದಾರ್ ಮಂಜುಳಾ ನಾಯಕ ಮಧ್ಯಾಹ್ನವಾದರೂ ಕಾರ್ಯಾಲಯಕ್ಕೆ ಆಗಮಿಸದಿರುವುದು ಮತ್ತು ಅವರ ಅನುಪಸ್ಥಿತಿ ಕುರಿತು ಮೇಲಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಿದರು. ತಹಸೀಲ್ದಾರ್ ಸರ್ಕಾರದಿಂದ ವಸತಿಗೃಹ ಇದ್ದರೂ ಅವರು ಇಲ್ಲ್ಲಿ ನಾಮಕೇವಾಸ್ಥೆ ಇರುತ್ತಾರೆ ಎಂದು ಲೋಕಾಯುಕ್ತ ಅಧಿಕಾರಿಗಳ ಬಳಿ ಆಕ್ಷೇಪಿಸಿದ್ದಾರೆ. ಡಿವೈಎಸ್ ಪುಷ್ಪಲತಾ ಎಸ್., ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ ಯಡಹಳ್ಳಿ, ಸಂಗಮನಾಥ ಹೊಸಮನಿ, ಸಿಬ್ಬಂದಿಗಳಾದ ಎಸ್.ಎಸ್.ಪೂಜೇರಿ ಇತರರಿದ್ದರು.