ಲೋಕಾ ಬಲೆಗೆ ಹೊಸಕೆರೆ ಪಿಡಿಒ

16M.D.R.4 MANJAMMA PDO HOSAKERE
ಮಂಜಮ್ಮ
Published on

ಮದ್ದೂರು: ನಿವೇಶನದ ಖಾತೆ ಮಾಡಿಕೊಡಲು ಲಂಚ ಕೇಳಿದ ದೂರು ಆಧರಿಸಿ ಮದ್ದೂರು ತಾಲೂಕು ಹೊಸಕೆರೆ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮ ಹಾಗೂ ಮಧ್ಯವರ್ತಿ ಅಭಿಷೇಕ್‌ಗೌಡ ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಹೊಸಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕೃಷ್ಣೇಗೌಡ ಎಂಬುವರು 60 ನಿವೇಶನಗಳನ್ನು ಖಾತೆ ಮಾಡಿಕೊಡುವಂತೆ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರತಿ ನಿವೇಶನಕ್ಕೆ 2 ಸಾವಿರ ರೂ.ನಂತೆ 1.20 ಲಕ್ಷ ರೂ.ಲಂಚ ಕೊಡಬೇಕೆಂದು ಪಿಡಿಒ ಡಿಮ್ಯಾಂಡ್ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣೇಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ಮಧ್ಯವರ್ತಿ ಮೂಲಕ ಹಣ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದಾರೆ.


ಲೋಕಾಯುಕ್ತ ಎಸ್ಪಿ ಸುರೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನೀಲ್‌ಕುಮಾರ್, ಇನ್‌ಸ್ಪೆಕ್ಟರ್ ಪ್ರಕಾಶ್, ಸಿಬ್ಬಂದಿ ಮಹದೇವಸ್ವಾಮಿ, ಶರತ್, ಶಂಕರ್, ಮಾನಸಾ ದಾಳಿ ನಡೆಸಿದರು. ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net