‘ಲೋಕಾ’ ಬಲೆಗೆ ಹೆಸ್ಕಾಂ ಗುತ್ತಿಗೆದಾರ

karnataka-lokayukta
Published on

ಮುಂಡರಗಿ: ರೈತರೊಬ್ಬರಿಂದ ಹೆಚ್ಚು ಹಣ ಪಡೆಯುತ್ತಿದ್ದ ಹೆಸ್ಕಾಂ ಗುತ್ತಿಗೆದಾರ ಸಿದ್ಧನಗೌಡ ಪಾಟೀಲ ಅವರನ್ನು ಜಿಲ್ಲಾ ಲೋಕಾಯುಕ್ತ ಪೊಲೀಸಲು ಗುರುವಾರ ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಜಂತ್ಲಿ- ಶಿರೂರು ಗ್ರಾಮದ ಬಿ.ಕೆ. ಗೌರಿ ಎಂಬ ರೈತನು ತನ್ನ ಸಂಬಂಧಿಯೊಬ್ಬರ ಪಂಪ್‌ಸೆಟ್ ಆರ್.ಆರ್. ನಂಬರ್ ಕೊಡಿಸುವಂತೆ ಗುತ್ತಿಗೆದಾರ ಸಿದ್ದನಗೌಡ ಪಾಟೀಲ ಅವರಲ್ಲಿ ಕೇಳಿಕೊಂಡಿದ್ದರು. ಗುತ್ತಿಗೆದಾರ ರೈತನಿಗೆ ಹೆಚ್ವುವರಿಯಾಗಿ 4,000 ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ರೈತ ಬಿ.ಕೆ. ಗೌರಿ ಅವರು ಗುರುವಾರ ಹೆಸ್ಕಾಂ ಕಾರ್ಯಾಲಯದಲ್ಲಿ ರೈತನಿಂದ ಹೆಚ್ಚವರಿ ಹಣ ಪಡೆಯುತ್ತಿದ್ದ ಸಮಯದಲ್ಲಿ ಜಿಲ್ಲಾ ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ್ ನೇತೃತ್ವದ ತಂಡವು ಸಿದ್ಧನಗೌಡ ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net