

ಕಲಬುರಗಿ: ವಸತಿ ನಿಲಯದ ಅಡುಗೆ ಸಹಾಯಕರಿಗೆ ಹಾಜರಾತಿ ನೀಡಲು ೧೫ ಸಾವಿರ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಾಸ್ಟೆಲ್ ವಾರ್ಡನ್‌ನನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಲೆಗೆ ಹಾಕಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಮೆಟ್ರಿಕ್ ನಂತರ ಸ್ನಾತಕೋತ್ತರ ಬಾಲಕರ ವಸತಿ ನಿಲಯದ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ಲಂಚ ಪಡೆಯುವಾಗ ಬಲೆಗೆ ಬಿದ್ದ ಆರೋಪಿ. ಅಡುಗೆ ಸಹಾಯಕರ, `ಡಿ' ಗ್ರೂಪ್ ನೌಕರರ ಹಾಜರಾತಿ ಪಡೆಯಲು ಪ್ರತಿ ತಿಂಗಳು ಶಿವಶರಣಪ್ಪಗೆ ೨೦ ಸಾವಿರ ರೂ. ಲಂಚ ನೀಡಬೇಕಿತ್ತು. ಹಣ ನೀಡದವರ ಹಾಜರಾತಿ ನೀಡದೆ ಸತಾಯುಸುತ್ತಿದ್ದ.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ೨೦ ಸಾವಿರ ಬೇಡಿಕೆ ಇಟ್ಟಿದ್ದು, ಈ ಪೈಕಿ ೧೫ ಸಾವಿರ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿದೆ. ಆರೋಪಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ವಸತಿ ನಿಲಯದ ಗ್ರೂಪ್ ಡಿ ನೌಕರ, ಅಡುಗೆ ಸಹಾಯಕ ಶ್ರೀಮಂತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ದಾಳಿ ಮಾಡಿz್ದÁರೆ. ಡಿವೈಎಸ್ಪಿ ಗೀತಾ ಬೇನಾಳ, ಸಹಾಯಕ ಸಬ್‌ಇನ್ಸೆö್ಪಕ್ಟರ್ ಬಸವರಾಜ, ಸಿಬ್ಬಂದಿ ಪ್ರದೀಪ್, ರೇಣುಕಮ್ಮ, ಕನ್ನೆಲಾಲï, ಸಂತೋಷಮ್ಮ, ಗುಂಡಪ್ಪ ಇತರರಿದ್ದರು.