ಲೋಕಸ್ಪಂದನ ಜಾರಿ,ಪೊಲೀಸ್ ಸೇವೆ ಪ್ರತಿಕ್ರಿಯೆಗೆ ಕ್ಯೂಆರ್‌ಕೋಡ್

CTD 2 Q R CODE--08
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಜನಸ್ನೇಹಿ ವ್ಯವಸ್ಥೆ ಬಲಪಡಿಸುವ ಸಲುವಾಗಿ ಕ್ಯೂಆರ್‌ಕೋಡ್ ಮೂಲಕ ಪೊಲೀಸ್ ಠಾಣೆಗಳಿಗೆ ಬರುವಂಥ ನಾಗರಿಕ ಂದ ಪ್ರತಿಕ್ರಿಯೆ ಹಾಗೂ ಸಲಹೆಗಳನ್ನು ಸ್ವೀಕರಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಶುಕ್ರವಾರ ದಿಂದ‘ಲೋಕಸ್ಪಂದನ’ಜಾರಿ ಗೊಳಿಸಲಾಗಿದೆ.
ಠಾಣೆಗೆ ದೂರು ನೀಡಲು ಹಾಗೂ ವಿವಿಧ ಪೊಲೀಸ್ ಸೇವೆಗೆ ಬರುವ ಸಾರ್ವಜನಿಕರು ಕ್ಯೂಆರ್ ಕೋಡ್ ಮೂಲಕ ತಮ್ಮ ಪ್ರತಿ ಕ್ರಿಯೆ ಹಾಗೂ ಸಲಹೆಗಳನ್ನು ನೀಡುವುದರಿಂದ, ಪೊಲೀಸ್ ಸೇವೆಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಹೆಚ್ಚಿಸಲು ಅನುಕೂಲ ವಾಗಲಿದೆ. ಆದ್ದರಿಂದ ಜಿಲ್ಲೆಯ ನಾಗರಿಕರು ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಮೊಬೈಲ್ ಮೂಲಕ ಅಲ್ಲಿರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಪೊಲೀಸ್ ಸೇವೆ ಪಡೆದ ಬಗ್ಗೆ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಜಾರಿಗೊಳಿಸಿ ರುವ‘ಲೋಕಸ್ಪಂದನ’ದ ಸದುಪಯೋಗ ಪಡೆದುಕೊಳ್ಳ ಬೇಕೆಂದು ಜಿಲ್ಲಾ ಪೊಲೀಸ್ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net