ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುದ್ದೇಬಿಹಾಳದಲ್ಲಿ ಮಾರ್ಚ್ ಪಾಸ್ಟ್

Muddebihal, March Past, Lok Sabha Elections, Paramilitary, Police,
ಮುದ್ದೇಬಿಹಾಳ ಪಟ್ಟಣದ ಡಿಎಸ್‌ಪಿ ಬಲ್ಲಪ್ಪ ನಂದಗಾಂವಿ ನೇತೃತ್ವದಲ್ಲಿ ಅರೆಸೇನಾಪಡೆ, ಪೊಲೀಸ್ ತುಕಡಿಗಳ ರೂಟ್ ಮಾರ್ಚ್ ಪಾಸ್ಟ್ ನಡೆಯಿತು.
Published on

ಮುದ್ದೇಬಿಹಾಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಆಗಮಿಸಿರುವ ಅರೆಸೇನಾಪಡೆಯ ಯೋಧರು, ಮುದ್ದೇಬಿಹಾಳ ಮತ್ತು ತಾಳಿಕೋಟೆ ಠಾಣೆಗಳ ಪೊಲೀಸರು, ಗೃಹರಕ್ಷಕ ದಳದವರು ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬ್ಯಾಂಡ್ ಸಮೇತ ರೂಟ್ ಮಾರ್ಚ್ ಪಾಸ್ಟ್ ನಡೆಸಿ ಜಾಗೃತಿ ಮೂಡಿಸಿದರು.

ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐಗಳಾದ ಸಂಜಯ ತಿಪ್ಪರೆಡ್ಡಿ, ಮಹ್ಮದಗೌಸ್ ಘೋರಿ ನೇತೃತ್ವದಲ್ಲಿ ಸಿಆರ್‌ಪಿಎ್ ಕಮಾಂಡಿಗ್ ಆಫೀಸರ್ ಜಾಯೆ ಪನ್ಸಾ ಮುಂದಾಳತ್ವ ವಹಿಸಿಕೊಂಡಿದ್ದರು.

ಪಿಲೇಕೆಮ್ಮ ನಗರದಿಂದ ಪ್ರಾರಂಭಗೊಂಡ ರೂಟ್ ಮಾರ್ಚ್ ಪಾಸ್ಟ್ ಬಸವೇಶ್ವರ ವೃತ್ತ, ಸರ್ಾ ಬಜಾರ್, ಕಿಲ್ಲಾ ಗಲ್ಲಿ , ಮೇಲಿನ ಓಣಿ, ಇಂದಿರಾ ವೃತ್ತ, ಗ್ರಾಮದೇವತೆ ಕಟ್ಟೆ, ಲಕ್ಷ್ಮೀ ವೆಂಕಟೇಶ್ವರ ದೇಗುಲ, ಶಾರದಾದೇವಿ ಮಂದಿರ, ರಾಘವೇಂದ್ರ ರಾಯರ ಮಠ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಸಮಾರೋಪಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net