

ಬೇಲೂರು: ಲೋಕಸಭಾ ಚುನಾವಣೆಯಲ್ಲಿ ಕಮಲ ಅರಳಿಸಲು ಕಾರ್ಯಕರ್ತರು ಸನ್ನದ್ಧ್ದರಾಗಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರೂ ಆದ ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಾಸನ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ನಮ್ಮ ನಾಯಕರಾದ ಸಿ.ಟಿ.ರವಿ ಹಾಗೂ ಪ್ರೀತಂಗೌಡರ ಸೋಲು ನೋವು ತಂದಿದೆ. ಆದರೆ ಹಾಸನದಲ್ಲಿ ಬಿಜೆಪಿ ತನ್ನ ಮತ ಬ್ಯಾಂಕ್ ಹೆಚ್ಚಿಸುವ ಮೂಲಕ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಿಸಲು ಮುಂದಾಗುತ್ತಿದೆ. ನಾನು ಶಾಸಕನಾದ ನಂತರ ಬೇಲೂರು ಕ್ಷೇತ್ರವನ್ನು ಅಧಿಕಾರಿಗಳ ಸಹಕಾರದಿಂದ ಅಭಿವೃದ್ಧಿಗೊಳಿಸಲು ಪಣ ತೊಟ್ಟಿದ್ದೇನೆ ಎಂದರು.
ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯಲು ಬಿಡುವುದಿಲ್ಲ. ಕಾರ್ಯಕರ್ತರು ನನಗೆ ಚುನಾವಣೆಯಲ್ಲಿ ಶಕ್ತಿ ನೀಡಿದಂತೆ ಕ್ಷೇತ್ರದ ಅಭಿವೃದ್ಧಿಗೂ ಬೆಂಬಲ ನೀಡಬೇಕು. ತಾಲೂಕಿನಲ್ಲಿ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ. ಅವರಿಗೆ ಚುರುಕು ಮುಟ್ಟಿಸುವ ಕೆಲಸ ನಡೆದಿದೆ. ಮರಳು, ಮರದ ದಂಧೆಗೆ ಕಡಿವಾಣ ಹಾಕಲು ಎಲ್ಲ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್. ಮಾಜಿ ಶಾಸಕ ವಿಶ್ವನಾಥ, ಮುಖಂಡರಾದ ಜೆ.ಕೆ.ಕುಮಾರ್, ಸಂತೋಷ ಕೆಂಚಾಂಬ, ಸಂಪತ್ತು, ರಮೇಶ್. ಅರುಣಕುಮಾರ್, ಪ್ರಭಾಕರ್. ಪವರ್ತಯ್ಯ, ಡಾ.ನಾರಾಯಣಸ್ವಾಮಿ, ಸೋಮಣ್ಣ, ಸಿ.ಎಸ್.ಪ್ರಕಾಶ್, ದಿಲೀಪ್ ಸೇರಿದಂತೆ ಇತರರಿದ್ದರು.