

ಹಾಸನ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಅಭ್ಯರ್ಥಿಗಳಿಗೆ ಮತ ಎಣಿಕೆಯ ಪ್ರಕ್ರಿಯೆ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ ಸತ್ಯಭಾಮ ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೂನ್ 4ರಂದು ಮತ ಎಣಿಕೆ ನಡೆಯುವ ಹಿನ್ನಲೆಯಲ್ಲಿ ಎಣಿಕೆ ಸ್ಥಳ, ಎಣಿಕೆ ಪ್ರಾರಂಭದ ಸಮಯ, ಕೊಠಡಿ ಹಾಗೂ ಇತರೆ ವಿಷಯಗಳ ಕುರಿತು ಸಭೆ ನಡೆಸಿದರು.
ಮತ ಎಣಿಕೆ ನಡೆಯುವ ವೇಳೆಯಲ್ಲಿ ಅಭ್ಯರ್ಥಿಗಳ ಪರವಾಗಿ ಎಣಿಕಾ ಏಜೆಂಟ್ ನೇಮಕದ ಬಗ್ಗೆ ಹಾಗು ಏಜೆಂಟ್‌ಗಳಿಗೆ ನಿಗದಿ ಪಡಿಸಿದ ಸ್ಥಳಗಳ ಬಗ್ಗೆ ಮಾಹಿತಿ ನೀಡಿದರು. ಎಣಿಕಾ ಏಜೆಂಟ್ ವಿವರವನ್ನು ಮೊದಲೇ ಸಲ್ಲಿಸಿ ಏಜೆಂಟ್ ಗುರುತಿನ ಚೀಟಿ ಪಡೆಯುವಂತೆ ಹಾಗು ಏಜೆಂಟ್ ನೇಮಕದ ವೆಚ್ಚವನ್ನು ಆಯಾ ರಾಜಕೀಯ ಪಕ್ಷದ ಅಭ್ಯರ್ಥಿಗಳು ವೆಚ್ಚಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಎಣಿಕೆ ಕೇಂದ್ರಕ್ಕೆ ಆಗಮಿಸುವ ಎಣಿಕಾ ಏಜೆಂಟ್‌ಗಳು ತಮ್ಮ ಗುರುತಿನ ಚೀಟಿಯನ್ನು ನೀಡಿರುವ ಕೊಠಡಿ ಮಾತ್ರ ಸೀಮಿತವಾಗಿರುತ್ತದೆ. ಎಣಿಕ ಕೇಂದ್ರಕ್ಕೆ ಮೊಬೈಲ್ ಹಾಗೂ ಇತರೆ ಅಪಾಯವನ್ನು ಉಂಟುಮಾಡುವ ವಸ್ತುಗಳನ್ನು ನಿಬರ್ಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಟಿ ಶಾಂತಲಾ, ಹಾಗೂ ಅಭ್ಯರ್ಥಿಗಳು, ಚುನಾವಣಾ ಏಜೆಂಟ್ ಗಳು ಉಪಸ್ಥಿತರಿದ್ದರು.