ಲೋಕಯುಕ್ತ ದಾಳಿ, 41 ಸಾವಿರ ನಗದು ವಶ

Published on

ಬಳ್ಳಾರಿ : ತಾಲೂಕಿನ ಪಿಡಿ ಹಳ್ಳಿಯ ಆರ್‌ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಯುಕ್ತ ಪೊಲೀಸರು ಮಂಗಳವಾರ ಬೆಳಗಿನ ಜಾವ ದಾಳಿ ನಡೆಸಿ, ದಾಖಲೆರಹಿತ 41,700 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ರಾಜ್ಯಾದ್ಯಂತ ಲೋಕಯುಕ್ತ ಅಧಿಕಾರಿಗಳು ಆರ್‌ಟಿಒ ಚೆಕ್ ಪೋಸ್ಟ್ ಏಕಕಾಲಕ್ಕೆ ದಾಳಿ ನಡೆಸಿದ ಹಿನ್ನಲೆ ಬಳ್ಳಾರಿ ತಾಲೂಕಿನ ಪಿಡಿಹಳ್ಳಿ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿದೆ. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಯಾವ ಅಧಿಕಾರಿಯನ್ನು ಬಂಧಿಸಿಲ್ಲ , ವಶಪಡಿಸಿಕೊಂಡ ದಾಖಲೆಗಳನ್ನು ಮುಖ್ಯ ಕಚೇರಿಗೆ ಕಳುಹಿಸಲಾಗಿದೆ ಎಂದು ಲೋಕಯುಕ್ತ ಎಸ್ಪಿ ಸಿದ್ದರಾಜು ತಿಳಿಸಿದರು. ಡಿವೈಎಸ್ಪಿ ವಸಂತಕುಮಾರ, ಸಿಪಿಐ ರಫೀಕ್, ಸಿಬ್ಬಂದಿ ಸಂಗಮೇಶ್ ಸೇರಿದಂತೆ ಇತರರು ಕಾರ್ಯಾಚಾರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net