ಲೋಕಕಲ್ಯಾಣಾರ್ಥ ಮಹಾ ರುದ್ರಯಾಗ

1305 KLB 03
Published on

ಕಲಬುರಗಿ: ಮಳೆ, ಬೆಳೆ ಆಗಲಿ, ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ನಗರದ ನ್ಯೂ ರಾಘವೇಂದ್ರ ಕಾಲನಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ಭಕ್ತಿ, ಶ್ರದ್ಧೆ, ವೇದ ಘೋಷಗಳೊಂದಿಗೆ ನೆರವೇರಿತು. ಶ್ರೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್, ಶಂಕರ ಜಯಂತ್ಯುತ್ಸವ ಶ್ರೀ ಮಹಾರುದ್ರಯಾಗ ಸಂಚಾಲನ ಸಮಿತಿಯಿಂದ ಮೇ ೧೦ರಿಂದ ಭಾನುವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಭಾನುವಾರ ಬೆಳಗ್ಗೆ ರುದ್ರಪಾರಾಯಣ, ಮಾತೆಯರಿಂದ ಲಲಿತಾ ಸಹಸ್ರ ನಾಮಾವಳಿ, ಕುಂಕುಮಾರ್ಚನ ನಂತರ ಯಾಗ ಪೂರ್ಣಾಹುತಿ ನೆರವೇರಿತು. ನೂರಾರು ವಿಪ್ರ ಅರ್ಚಕರು ಮಂತ್ರಪಠಣದೊAದಿಗೆ ವರುಣ ದೇವನಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ ಹವನಗೈದು ಮಳೆಗಾಗಿ ಪ್ರಾರ್ಥಿಸಿದರು.
ನಂತರ ಶ್ರೀ ಶಂಕರ ಜಯಂತಿ ನಿಮಿತ್ತ ಸಭಾ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನ ರಾಜ ಮಹಾಪ್ರಭುಗಳು, ಶ್ರೀ ದತ್ತಪ್ಪಯ್ಯ ಸ್ವಾಮೀಜಿ, ಶ್ರೀ ಸಿದ್ಧರಾಜ ಸ್ವಾಮೀಜಿ, ಶ್ರೀ ಸೋಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೋಹನ ಭಟ್ ಜೋಶಿ, ಗೋಪಾಲಾಚಾರ್ಯ ಅಕಮಂಚಿ, ವಿದ್ಯಾಸಾಗರ ಕುಲ್ಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net