

ವಾಡಿ: ಸರಿಯಾದ ಸಮಯಕ್ಕೆ ಮಳೆಯಾಗಲಿ, ಸಮೃದ್ಧ ಬೆಳೆಯಿಂದ ಉತ್ತಮ ಫಸಲು ಬರಲಿ, ಲೋಕ ಕಲ್ಯಾಣವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಕೋರವಾರದ ಶ್ರೀ ಅಣಿವೀರಭದ್ರೇಶ್ವರನ ಸನ್ನಿಧಿಗೆ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಹಲಕರ್ಟಿಯ ಕಟ್ಟಿಮನಿ ಹಿರೇಮಠದ ಶ್ರೀ ಮುನೀಂದ್ರ ಶಿವಾಚಾರ್ಯರು ಹೇಳಿದರು.
ಹಲಕರ್ಟಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದ ಅವರು, ಪರಸ್ಪರರಲ್ಲಿ ನಂಬಿಕೆ ಇಲ್ಲ, ಪ್ರಾಮಾಣಿಕತೆ ಸುಳಿಯುತ್ತಿಲ್ಲ, ಮನುಷ್ಯತ್ವ ಮಾಯವಾಗುತ್ತದೆ. ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಗುರುನಾಥ ಮಣಿಗೇರಿ ಮಾತನಾಡಿ, ಪಾದಯಾತ್ರೆ ವಾಡಿ, ಚಿತ್ತಾಪುರ ಮೂಲಕ ಸಾಗಿ ಬುಧವಾರ ರಾತ್ರಿ ದಂಡೋತಿಯ ಬಸವೇಶ್ವರ ದೇವಸ್ಥಾನದಲ್ಲಿ ವಸತಿ ಮಾಡಲಿದೆ. ಗುರುವಾರ ಬೆಳಗ್ಗೆ 7ಕ್ಕೆ ಶುರುವಾಗಿ ಕಲಗುರ್ತಿ, ಮಲಗಾಣ ಮಾರ್ಗವಾಗಿ ಸಂಜೆ ಕೋರವಾರ ತಲುಪಲಿದೆ ಎಂದು ತಿಳಿಸಿದರು.
ಪ್ರಮುಖರಾದ ಚಂದ್ರಕಾAತ ಮೇಲಿನಮನಿ, ರಾಜುಗೌಡ ಪೊಲೀಸ್ ಪಾಟೀಲ್, ಸೂಗಣ್ಣ ಚಂದನಕೇರಿ, ಪ್ರಕಾಶ ಜೋಶಿ, ಸುಭಾಷ ಚಂದನಕೇರಿ, ಮಲ್ಲಿಕಾರ್ಜುನ ಪೂಜಾರಿ, ರವಿ ಸಾಹು ಸಂಗಶೆಟ್ಟಿ, ರಾಘವೇಂದ್ರ ಅಲಿಪುರ, ಪ್ರಕಾಶ ಚಂದನಕೇರಿ, ಭಾಗಣ್ಣ ಹೊನಗುಂಟಿ, ಗೋರೆ ಪಾಷಾ ಜುನೈದಿ, ವೀರೇಶ ಜೀವಣಗಿ, ರವಿ ಸಿಂದಗಿ, ಶರಣಪ್ಪ ಸಾಹು ಜೀವಣಗಿ, ಬಸವರಾಜ ಲೋಕನಹಳ್ಳಿ, ಮಹದೇವಯ್ಯ ಸ್ವಾಮಿ, ಮಲ್ಲಿಕಾರ್ಜುನ ಭಜಂತ್ರಿ, ಸಚಿನ ಚವ್ಹಾಣ್, ಸಾಬಣ್ಣ ಬೆಳಗುಂಪಿ ಇತರರಿದ್ದರು.