ಲೋಕ ಅದಾಲತ್‌ನಲ್ಲಿ 244 ಪ್ರಕರಣ ಇತ್ಯರ್ಥ

Loka adalath
ಅರಕಲಗೂಡು ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರಾದ ಬಿ.ಕೆ. ನಾಗೇಶ್ ಮೂರ್ತಿ, ಚಂಪಾಶ್ರೀ, ಎಂ.ರಘು ಇತರರು ಇದ್ದರು.
Published on

 ಅರಕಲಗೂಡು: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ 244 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ಅದಾಲತ್ ಮುಂದೆ 498 ಪ್ರಕರಣಗಳು ಬಂದಿದ್ದವು. 244 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ. ನಾಗೇಶಮೂರ್ತಿ, ಜೆಂಎಫ್‌ಸಿ ನ್ಯಾಯಾಧೀಶರಾದ ಚಂಪಾಶ್ರೀ, 2 ನೇ ಹೆಚ್ಚುವರಿ ನ್ಯಾಯಾಧೀಶ ಎಂ.ರಘು, ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್ ಕುಮಾರ್, ಕಾರ್ಯದರ್ಶಿ ಶ್ರೀಧರ್, ಖಜಾಂಚಿ ಸೋಮಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net