

ಮೂಡಲಗಿ: ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಲೋಕ ಅದಾಲತ್ ಕಾರ್ಯಕ್ರಮ ದಾವೆದಾರರಿಗೆ ಬಹಳ ಅನುಕೂಲವಾಗಿದೆ ಎಂದು ಪಟ್ಟಣದ ದಿವಾಣಿ ಹಾಗೂ ಜೆಎಂಎ್ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಪಟ್ಟಣದ ದಿವಾಣಿ ಮತ್ತು ಜೆಎಂಎ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಸಮಯ ಹಾಗೂ ಹಣ ಉಳಿಸಬಹುದು. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯ ಮೆಟ್ಟಿಲು ಏರಿರುವವರು ಸಂಧಾನದ ಮೂಲಕ ಪರಿಹಾರ ಪಡೆದರೆ ಇಬ್ಬರಿಗೂ ಗೆಲುವು ಸಿಗುತ್ತದೆ ಎಂದರು
43 ನಾಗರಿಕ ಪ್ರಕರಣ, 1620 ಅಪರಾಧ ಪ್ರಕರಣ, 23 ಬ್ಯಾಂಕ್ ಪ್ರಕರಣ, ಮಹಿಳೆಗೆ ಉಪಜೀವನಾಂಶ, ಎರಡು ಜೋಡಿ ಹೊಂದಾಣಿಕೆ ಹಾಗೂ 265 ಜನನ&ಮರಣ ಪ್ರಕರಣಗಳನ್ನು ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ಇತ್ಯರ್ಥಗೊಳಿಸಿದರು. ಸರ್ಕಾರಿ ವಕೀಲೆ ಯು. ಶೋಭಾ, ವಕೀಲರ ಸಂದ ಅಧ್ಯಕ್ಷ ಆರ್.ಆರ್. ಬಾಗೋಜಿ, ಪ್ರಧಾನ ಕಾರ್ಯದರ್ಶಿ ಅನಿಲ ಕೌಜಲಗಿ, ವಕೀಲರಾದ ಲಕ್ಷ$್ಮಣ ಅಡಿಹುಡಿ, ಜ್ಯೋತಿ ಕೊಡತಿ, ದೀಪಾ ಕಿಲಾರಿ ಇತರರಿದ್ದರು.