

ವಿಜಯವಾಣಿ ಸುದ್ದಿಜಾಲ ಗದಗ
ಮಾನವನಿಗೆ ಬರುವ ಹಲವು ಕಾಯಿಲೆಗಳಿಗೆ ಸ್ವಚ್ಚವಾಗಿರದ ನಮ್ಮ ಕೈಗಳೇ ಕಾರಣ. ಅಲ್ಲದೆ ಕರುಳಿನ ಸೋಂಕಿಗೂ ಇದು ಕಾರಣವಾಗಿ ಅನಾರೋಗ್ಯಕ್ಕೆ ದಾರಿ ಮಾಡಿ ಕೊಡುತ್ತದೆ ಎಂದು ಲೈಯನ್ಸ್ ಲೇಡಿಜ್ ಕ್ಲಬ್ ಅಧ್ಯೆ ಸಾವಿತ್ರಿ ಶಿಗ್ಲಿ ಹೇಳಿದರು.
ಶನಿವಾರ ಬೆಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3 ರಲ್ಲಿ ಏರ್ಪಡಿಸಿದ್ದ "ಮಕ್ಕಳಲ್ಲಿ ಕೈತೊಳೆಯುವ ವಿಧಾನ ಹಾಗೂ ಮದ್ರಾಸ್ ಐ' ಜಾಗೃತಿ ಕುರಿತು ಮಾಹಿತಿ ಹಾಗೂ ತಿಳುವಳಿಕೆ ಪಾತ್ಯಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಬೂನಿನಿಂದ 15 ಸೆಕೆಂಡ್ಗಳ ಕಾಲ ಸ್ವಚ್ಚವಾಗಿ ಕೈ ತೊಳೆಯುವದರಿಂದ ಶೇ. 90 ರಷ್ಟು ಬ್ಯಾಕ್ಟರಿಯಾಗಳು ನಾಶವಾಗುತ್ತವೆ. ಕೈ ತೊಳೆಯುವದು ಹಾಗೂ ವೈಯಕ್ತಿಕ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು. ವೈಜ್ಞಾನಿಕವಾಗಿ 6 ಹಂತಗಳಲ್ಲಿ ನಾವು ಕೈ ತೊಳೆಯುವದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ರಾಜು ಮಲ್ಲಾಡದ ಮಾತನಾಡಿ ವಿದ್ಯಾಥಿರ್ ದೆಸೆಯಲ್ಲಿಯೇ ಆರೋಗ್ಯ ರ್ಪೂಣತೆಯನ್ನು ರೂಢೀಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯನಿ ಪುಷ್ಪಾ ನಿಡಗುಂದಿ ಮಾತನಾಡಿ, ಉತ್ತಮ ಆರೋಗ್ಯ ಹೊಂದಲು ಉತ್ತಮ ಜೀವನ ಶೈಲಿ ಅವಶ್ಯವಾಗಿದ್ದು ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಹವ್ಯಾಸಗಳನ್ನು ರೂಢೀಸುವುದರಿಂದ ಅವರು ಅಭಿವೃದ್ಧಿ ಹೊಂದುತ್ತಾರೆ ಎಂದರು.
ಆನಂದಸಿಂಗ್ ಕಾಟೇವಾಲ, ಕಮಲವ್ವ ಗಾರವಾಡ, ಹೊಳೆಬಸಪ್ಪ ಅಕ್ಕಿ, ಪಿ. ಡಿ. ಹುಗ್ಗೇನವರ, ಎಸ್. ಮಂಗಳೂರ, ಡಿ. ವೈ. ಕಂಬಳಿ, ಸರಸ್ವತಿ ಗುಡಿಸಾಗರ, ವಜ್ರಾ ನೀಲಗುಂದ ಹಲವರು ಇದ್ದರು.