ಲೈನ್‌ಮನ್‌ಗಳು ಸುರಕ್ಷತಾ ಸಾಧನ ಬಳಸಿ

4-KGL-1 (....
Published on

ಕೊಳ್ಳೇಗಾಲ: ಕಡ್ಡಾಯವಾಗಿ ಲೈನ್‌ಮನ್‌ಗಳು ಸುರಕ್ಷತಾ ಸಾಧನ ಬಳಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೆಸ್ಕ್ ಇಇ ತಬಸ್ಸುಮ್ ಅಪ್ಜಾ ಭಾನು ಸಲಹೆ ನೀಡಿದರು.

ಪಟ್ಟಣದ ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಕೊಳ್ಳೇಗಾಲ ಸೆಸ್ಕ್ ಉಪವಿಭಾಗ ವತಿಯಿಂದ ಇತ್ತೀಚೆಗೆ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಆರೋಗ್ಯ ವಿಮಾ ಕಾರ್ಡ್ ವಿತರಣೆ, ಸುರಕ್ಷಾ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು. ರೈತರಿಗೆ ಯಾವುದೇ ಸಮಯದಲ್ಲಿ ವಿದ್ಯುತ್ ಸಮಸ್ಯೆಯಾದರೆ ತಕ್ಷಣವೇ ಲೈನ್‌ಮನ್‌ಗಳು ಸ್ಪಂದಿಸಿ ಕೆಲಸ ಮಾಡಿದರೆ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ. ಮಳೆ, ಗಾಳಿ ಮತ್ತು ಯಾವುದೇ ಸಮಯದಲ್ಲಿ ವಿದ್ಯುತ್ ದುರಸ್ತಿ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಸಾಧನ ಬಳಸಿ ಕೆಲಸ ಮಾಡಬೇಕು. ಲೈನ್‌ಮನ್ ಹಾಗೂ ಸೆಸ್ಕ್ ಸಿಬ್ಬಂದಿಗೆ 2.5 ಲಕ್ಷದವರೆಗೂ ಆರೋಗ್ಯ ಕಾರ್ಡ್ ವಿತರಣೆ ಮಾಡಿದ್ದು, ಸದುಪ ಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸೆಸ್ಕ್ ಎಇಇ ಎಂ.ರಾಜು, ಎಸ್.ಲಿಂಗರಾಜು, ರಂಗಸ್ವಾಮಿ, ಸಂಘದ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಮಹದೇವಯ್ಯ, ನೌಕರರ ಸಂಘದ ಅಧ್ಯಕ್ಷ ಎಚ್.ರೇವಣ್ಣ, ಪರಿಶಿಷ್ಟ ಜಾತಿ ವರ್ಗಗಳ ನೌಕರರ ಸಂಘದ ಅದ್ಯಕ್ಷ ಪಿ.ಮಲ್ಲ ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net