

ಬೆಂಗಳೂರು: ಲೈಂಗಿಕವಾಗಿ ಅಶಕ್ತವಾಗಿದ್ದರೂ ಈ ಮಾಹಿತಿ ಮುಚ್ಚಿಟ್ಟು ವಿವಾಹವಾಗಿ ವಂಚಿಸಿದ ಪೈಲೆಟ್‌ವೊಬ್ಬನ ವಿರುದ್ಧ ಆತನ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪತ್ನಿಯ ಆರೋಪದಿಂದ ಪತಿ ಪೇಚಿಗೆ ಸಿಲುಕಿದ್ದಾನೆ.
ಮಲ್ಲೇಶ್ವರ ನಿವಾಸಿ 24 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಸಮೀರ್ (29) ಎಂಬಾತನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ವೃತ್ತಿಯಲ್ಲಿ ಪೈಲೆಟ್ ಆಗಿರುವ ಸಮೀರ್ ಕಳೆದ ೆಬ್ರುವರಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದ. ಇದಾದ ಬಳಿಕ ಕೆಲ ತಿಂಗಳು ಕಳೆದರೂ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಪತ್ನಿ ಈ ಬಗ್ಗೆ ಪ್ರಶ್ನಿಸಿದಾಗ, ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ನಿನ್ನೊಂದಿಗೆ ಆತ್ಮೀಯವಾಗಿರಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದ. ಈ ನಡುವೆ ಸಮೀರ್ ವರ್ತನೆಯಿಂದ ಅನುಮಾನಗೊಂಡ ಪತ್ನಿ, ಆತನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಳು. ವೈದ್ಯರು ಪರೀಕ್ಷಿಸಿದಾಗ, ಸಮೀರ್ ಅತಿಯಾಗಿ ಮದ್ಯಪಾನ ಮಾಡುವುದು, ಸಿಗರೇಟ್ ಸೇದುತ್ತಿರುವುದು ಗಮನಕ್ಕೆ ಬಂದಿತ್ತು. ಅಲ್ಲದೆ, ಸಮೀರ್ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದರು.
ಪತಿಯ ವೈಯಕ್ತಿಕ ಮಾಹಿತಿ ಮರೆಮಾಚಿದರು:
ಈ ವಿಚಾರವನ್ನು ಸಮೀರ್ ಪಾಲಕರ ಗಮನಕ್ಕೆ ತಂದಾಗ, ಮೊದಲೇ ಅವರಿಗೆ ಇದು ತಿಳಿದಿರುವುದು ಗೊತ್ತಾಯಿತು. ಈ ಬಗ್ಗೆ ಪತಿಯನ್ನು ಪ್ರಶ್ನಿಸಿದಾಗ ವಿನಾ ಕಾರಣ ಜಗಳ ಮಾಡಿ ಬೆದರಿಸಲು ಆರಂಭಿಸಿದ್ದ. ರಾತ್ರಿ ಹೊತ್ತು ಮನೆಗೆ ಬಾರದೆ, ನನ್ನೊಂದಿಗೆ ಕಾಲ ಕಳೆಯದೇ ಸಬೂಬು ಹೇಳುತ್ತಿದ್ದ. ನಂತರ ನನ್ನ ಒತ್ತಾಯದ ಮೇರೆಗೆ ಯಲಹಂಕದಲ್ಲಿ ಮನೆ ಮಾಡಿದ್ದ. ಅಲ್ಲೂ ಇದೇ ವಿಚಾರಕ್ಕೆ ಜಗಳ ಮಾಡಿ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿದ್ದ. ಸಾಲದಕ್ಕೆ ತವರು ಮನೆಯಿಂದ ಆಸ್ತಿ ತರುವಂತೆ ಪೀಡಿಸುತ್ತಿದ್ದ. ಲೈಂಗಿಕವಾಗಿ ಅಶಕ್ತವಾಗಿದ್ದರೂ ಅದನ್ನು ಮರೆ ಮಾಚಿ ಹೆಚ್ಚಿನ ವರದಕ್ಷಿಣೆ ಆಸೆಗಾಗಿ ವಿವಾಹವಾದ ಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾಳೆ. ಇದೀಗ ಪತ್ನಿ ನೀಡಿರುವ ದೂರಿನಿಂದ ಪೇಚಿಗೆ ಸಿಲುಕಿರುವ ಪತಿಗೆ ಈ ಪ್ರಕರಣ ಎದುರಿಸುವುದೇ ಸವಾಲಾಗಿ ಪರಿಣಮಿಸಿದೆ.