ಲೈಂಗಿಕ ಅಲ್ಪಸಂಖ್ಯಾತರೇ ಅಭಿನಯಿಸುತ್ತಿರುವ ನಾಟಕ ಪ್ರದರ್ಶನ

Drama 6x4
Published on

ಲೈಂಗಿಕ ಅಲ್ಪಸಂಖ್ಯಾತರು ಸ್ಥಾಪಿಸಿರುವ ಬೆಂಗಳೂರಿನ ಪಯಣ ಸಂಸ್ಥೆ ವತಿಯಿಂದ ಜು.21ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಲೈಂಗಿಕ ಅಲ್ಪಸಂಖ್ಯಾತರೇ ಅಭಿನಯಿಸುತ್ತಿರುವ ‘ತಲ್ಕಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ನೋವು, ನಲಿವು, ಸಂಸ್ಕೃತಿಯನ್ನು ಈ ನಾಟಕ ಒಳಗೊಂಡಿದೆ. ನಟಿಸುತ್ತಿರುವವರೆಲ್ಲರೂ 50 ವರ್ಷ ಮೀರಿದವರೇ ಆಗಿದ್ದಾರೆ. ನಾಟಕದ ಕೆಲ ಸನ್ನಿವೇಶಗಳಲ್ಲಿ ಈ ಸಮುದಾಯದವರೇ ಬಳಸುವ ವಿಶಿಷ್ಟವಾದ ಲಿಪಿ ಇಲ್ಲದ ಭಾಷೆ ಬಳಕೆಯೂ ಇದೆ.

ಉದಯಗಿರಿಯ ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ವಾರ್ಷಿಕೋತ್ಸವದ ಅಂಗವಾಗಿ ಜು.21 ರಂದು ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಣ್ಣಾವ್ರ ವಿಶೇಷ ಪ್ರೇಮಗೀತೆಗಳು ಎಂಬ ಚಲನಚಿತ್ರಗಳ ಹಾಡುಗಳ ಕಾರ್ಯಕ್ರಮ ಆಯೋಜಿಸಲಾಗಿದೆ.

ಬಿ.ಎಸ್.ಜಯರಾಮರಾಜು ನೇತೃತ್ವದಲ್ಲಿ ಅಂದು ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಿ ರಾತ್ರಿ 9.30ರವರೆಗೆ ನಡೆಯಲಿದೆ. ಡಾ. ರಾಜ್‌ಕುಮಾರ್ ಅವರ ಗಾಯನ ಹಾಗೂ ಅಭಿನಯದಲ್ಲಿ ಬಂದ 40 ಗೀತೆಗಳನ್ನು ಈ ವೇಳೆ ಹಾಡಲಾಗುವುದು. ಎಲ್ಲರಿಗೂ ಉಚಿತ ಪ್ರವೇಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net