

ನಾಪೋಕ್ಲು: ಇಂಡಿಯನ್ ಮಿಲಿಟರಿ ಅಕಾಡೆಮಿಯ 152ನೇ ಕೋರ್ಸ್‌ನ ನಿರ್ಗಮಿತ ಪಥಸಂಚಲನದಲ್ಲಿ ಚೆಯ್ಯಂಡಾಣೆ ಸಮೀಪದ ಮರಂದೋಡ ಗ್ರಾಮದ ಶಯನ್ ಸೋಮಣ್ಣ 9ನೇ ಗ್ರೆನೇಡಿಯರ್ ರೆಜಿಮೆಂಟ್‌ಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ನಾಪೋಕ್ಲುವಿನ ಸೆಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಹಾಗೂ ಜವಾಹರ್ ನವೋದಯ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಕೂಡಿಗೆ ಸೈನಿಕ ಶಾಲೆಯಲ್ಲಿ ಮುಗಿಸಿ ಶಾಲಾ ನಾಯಕನಾಗಿ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಖಿಖಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, 3 ವರ್ಷ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ, ಜವಾಹರ್ ನೆಹರು ಯೂನಿವರ್ಸಿಟಿಯಲ್ಲಿ ಬಿಎಸ್ಸಿ (ಸಿಎಸ್) ಪದವಿ ಪಡೆದರು. ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ( ಘೆಈಅ)ಯಲ್ಲಿ ಬೆಟಾಲಿಯನ್ ಕ್ಯಾಪ್ಟನ್ ಹಾಗೂ ಅಕಾಡೆಮಿಕ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದರು.
ಇವರು ಮಾರ್ಚಂಡ ವಿಜಯ್ ನಂಜಪ್ಪ ಮತ್ತು ಮಾರ್ಚಂಡ ಚಿತ್ರ ದಂಪತಿ ಪುತ್ರ.