ಲೂಟಿಯಾಗಿದ್ದ 16 ಲಕ್ಷ ರೂ. ಹವಾಲ ಹಣ

Published on

ಮಂಗಳೂರು: ನಗರದ ಓಲ್ಟ್ ಕೆಂಟ್ ರಸ್ತೆಯಲ್ಲಿ ಅಬ್ದುಲ್ ಸಲಾಂ ಅವರ ಸ್ಕೂಟರ್ ತಡೆದು ತಂಡವೊಂದು ಲೂಟಿ ಮಾಡಿದ್ದ 16 ಲಕ್ಷ ರೂಪಾಯಿ ಹವಾಲ ಹಣ ಎಂದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.

ಲೂಟಿಕೋರರಾದ ಮಹಮ್ಮದ್ ರಿಫಾತ್, ಅಸ್ಪಾಖ್, ಜಾಫರ್ ಸಾದಿಕ್, ಮಹಮ್ಮದ್ ಇಸ್ಮಾಯಿಲ್ ಅವರನ್ನು ಬಂಧಿಸಲಾಗಿದೆ.

ಅಬ್ದುಲ್ ಸಲಾಂ ಅವರು ಅಕ್ಕನ ಮಗಳ ಮದುವೆಗೆ ಬಟ್ಟೆ ಖರೀದಿಸಲು ಹಣ ತಂದಿದ್ದಾಗಿ ಪೊಲೀಸ್ ದೂರು ನೀಡಿದ್ದರು. ಇದೀಗ ಹವಾಲ ಹಣ ಆಗಿರುವುದರಿಂದ ಸಲಾಂ ವಿರುದ್ದವೂ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net