ಲೀಡ್ ಕೊಡಿಸಿ,ಕೈ ಕಾರ‌್ಯಕರ್ತರಿಗೆ ಶಾಸಕ ಸೂಚನೆ

ctd 0004
Published on

ಚಿತ್ರದುರ್ಗ: ರಾಜ್ಯಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರೆಂಟಿಗಳೆಡೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರ್ನಾಟಕ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ,ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಕಾರ‌್ಯಕರ್ತರಿಗೆ ಸೂಚಿಸಿದರು.
ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿ ಮುದ್ದಾಪುರ,ಚಿಕ್ಕಗೊಂಡನಹಳ್ಳಿ,ಕೂನಬೇವು,ಮಾಡನಾಯಕನಹಳ್ಳಿ ಗ್ರಾಪಂ ವ್ಯಾ ಪ್ತಿ ಮುಖಂಡರ ಕಾರ್ಯಕರ್ತರನ್ನು ಬುಧವಾರ ಭೇಟಿ ಮಾಡಿ ಮಾತನಾಡಿದ ಅವರು,ಪ್ರತಿ ಮನೆಗೂ ತೆರಳಿ ಯೋಜನೆಗಳೆಡೆ ಅರಿವು ಮೂಡಿಸುವ ಮೂಲಕ ತಮ್ಮ ಗ್ರಾಮಗಳಲ್ಲಿ ಪಕ್ಷಕ್ಕೆ ಅಧಿಕ ಮತಗಳನ್ನು ಕೊಡಿಸಬೇಕೆಂದರು. ಕೇಂದ್ರ ಸರ್ಕಾರ ಬರ ಪರಿಹಾರ ಹಣ ಬಿಡು ಗಡೆ ಮಾಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದರು ರಾಜ್ಯ ಬಿಜೆಪಿ ನಾಯಕರು ಕೇಂದ್ರವನ್ನು ಪ್ರಶ್ನಿಸುತ್ತಿಲ್ಲವೆಂದರು.
ಜಿಪಂ ಸದಸ್ಯ ಮಾಜಿ ಸದಸ್ಯಬಾಬುರೆಡ್ಡಿ,ಮುದ್ದಾಪುರ ಗ್ರಾ.ಪಂ.ಅಧ್ಯಕ್ಷೆ ಮಂಗಳಾಸಿದ್ದೇಶ್,ಉಪಾಧ್ಯಕ್ಷೆ ಸುಧಾರಾಣಿ,ಚಿಕ್ಕಗೊಂಡನ ಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಾಂತಮ್ಮ ಏಕಾಂತಪ್ಪ,ಉಪಾಧ್ಯಕ್ಷ ಗಂಗಾಧರ,ಮಾಡನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷ ಅನಿಲ್‌ಕುಮಾರ್,ಕೂನ ಬೇವು ಗ್ರಾ.ಪಂ.ಅಧ್ಯಕ್ಷೆ ಕವಿತಾನಾಗರಾಜ್, ಉಪಾಧ್ಯಕ್ಷೆ ಪೂಜಾರ್ ಮಂಜಣ್ಣ,ಗ್ರಾಪಂ ಸದಸ್ಯರಾದ ಮೈಲಾರಪ್ಪ,ಶೇಖರಪ್ಪ,ಲೋಕೇಶ್, ರವಿ,ವಾಜೀದ್,ಲಿಂಗಾರೆಡ್ಡಿ,ದೊರೆಸ್ವಾಮಿ,ಸಂತೋಷ,ನಾಗರಾಜ್,ಮುಖಂಡರಾದ ರಾಜಪ್ಪ,ಸಿದ್ದೇಶ್,ಬಸವರಾಜ್,ತಿಪ್ಪೇಶ್,ನಿರಂಜ ನ್,ನಾಗೇಶ್,ಚಿತ್ರಲಿಂಗಪ್ಪ,ತಿಪ್ಪೇಸ್ವಾಮಿ,ರವಿ,ಅಜ್ಜಪ್ಪ, ಬಾಬು,ತಿಪ್ಪಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net