

ಮಾಗಡಿ: ಪ್ರತಿ ಲೀಟರ್ ಹಾಲಿಗೆ 3 ಅಥವಾ 5 ರೂ. ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ತಾಲೂಕಿನ ಪೂಜಾರಿಪಾಳ್ಯದಲ್ಲಿ ವಿಶ್ವ ಕ್ಷೀರ ದಿನಾಚರಣೆ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವಾರದೊಳಗೆ ಹಾಲಿನ ದರ ಏರಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಇದಾಗದಿದ್ದರೆ ಸಹಕಾರ ಸಚಿವ ಹಾಗೂ ಮುಖ್ಯಮಂತ್ರಿಗಳ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು. ಈ ಬಗ್ಗೆ ಎಲ್ಲ ಒಕ್ಕೂಟಗಳು ಸೇರಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
1 ಕೋಟಿ ಲೀಟರ್ ಸಂಗ್ರಹ ಗುರಿ: ವಿಶ್ವ ರ ದಿನದ ಅಂಗವಾಗಿ ಬಡವರು ಮತ್ತು ಕಿದ್ವಾಯಿ ಆಸ್ಪತ್ರೆಯಲ್ಲಿ ಹಾಲು ವಿತರಿಸಲಾಗಿದೆ. ಹಲವಾರು ವರ್ಷಗಳಿಂದ ಈ ಕಾರ್ಯ ಮಾಡಲಾಗುತ್ತಿದೆ. ಹಾಲು ದಿನಾಚರಣೆ ಪ್ರಯುಕ್ತ ರೈತರಿಗೆ ಅನುಕೂಲ ಕಲ್ಪಿಸುವ ಯೋಜನೆ ಘೋಷಣೆ ಮಾಡಲು ಚಿಂತಿಸಲಾಗಿತ್ತು. ಆದರೆ, ಕೆಎಂಫ್ ಅಧ್ಯಕ್ಷರು ಲಭ್ಯವಿರದ ಕಾರಣ ಇದು ಸಾಧ್ಯವಾಗಲಿಲ್ಲ. ಬಮುಲ್ನಲ್ಲಿ ಸದ್ಯ 95 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇನ್ನೊಂದು ವಾರದಲ್ಲಿ ಇದನ್ನು 1 ಕೋಟಿ ಲೀಟರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.
ಕ್ಷೀರ ಭವನಕ್ಕೆ ಶ್ರೀ ಚಾಲನೆ: ಮಾಗಡಿಯಲ್ಲಿ 6.25 ಕೋಟಿ ರೂ. ವೆಚ್ಚದಲ್ಲಿ ಕ್ಷೀರ ಭವನ ನಿಮಾರ್ಣಕ್ಕೆ ಶ್ರೀ ಚಾಲನೆ ನೀಡಿ ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ತಾಲೂಕಿನಲ್ಲಿ ಚಿಲ್ಲಿಂಗ್ ಸೆಂಟರ್ ನಿರ್ಮಿಸಲು ಜಾಗ ಕೊಡಿಸುವ ನಾಯಕರಿಲ್ಲ. ಈ ಬಗ್ಗೆ ಶಾಸಕ ಎ.ಮಂಜುನಾಥ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನರಸಿಂಹಮೂರ್ತಿ ಹೇಳಿದರು. ದೊಡ್ಡಬಳ್ಳಾಪುರದಲ್ಲಿ ಟೆಟ್ರಾ ಪ್ಯಾಕ್ ಕಾರ್ಖಾನೆ ಆರಂಭಿಸಲಾಗುವುದು. ಕನಕಪುರದಲ್ಲಿ ಹಾಲಿನ ಪೌಡರ್, ಬೆಣ್ಣೆ ಸಂಗ್ರಹಕ್ಕೆ ಗೋದಾಮು ನಿರ್ಮಿಸಲಾಗಿದೆ. ಎಲ್ಲ ಒಕ್ಕೂಟಗಳಲ್ಲಿ ಗ್ಯಾಸ್ ಘಟಕ ನಿರ್ಮಿಸಲು ಚಿಂತಿಸಲಾಗಿದೆ. ವಿದ್ಯುತ್ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಕನಕಪುರ ಬಳಿ ಸೋಲಾರ್ ಟಕ ನಿರ್ಮಾಣಕ್ಕೆ ಚಿಂತಿಸಲಾಗಿದ್ದು, ಇದಕ್ಕೆ 15 ಎಕರೆ ಭೂಮಿ ಕೊಡಿಸುವಂತೆ ಸಂಸದರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ವಾರದೊಳಗೆ ಸೂಕ್ತ ಸ್ಪಂದನೆ ಸಿಗುವ ನಿರೀೆಯಿದೆ ಎಂದರು. ಹೊಸಕೋಟೆಯಲ್ಲಿ ನೀರು ಖರೀದಿಯಿಂದ 3 ಕೋಟಿ ರೂ. ನಷ್ಟ ಉಂಟಾಗುತ್ತಿದ್ದು ಇದರಿಂದಾಗಿ ಕೊಳವೆ ಬಾವಿ ಕೊರೆಸಿ ಹಣ ಉಳಿಸಲಾಗಿದೆ ಎಂದರು.
ಸಣ್ಣ & ಪುಟ್ಟ ಗೊಂದಲವಷ್ಟೆ: ಕಾಂಗ್ರೆಸ್ನಲ್ಲಿ ಸಣ್ಣಪುಟ್ಟ ಗೊಂದಲ ಬಿಟ್ಟರೆ ಬೇರೇನೂ ಇಲ್ಲ. ಎಚ್.ಎಂ.ರೇವಣ್ಣ ಅವರ ಬಗ್ಗೆ ಅಸಮಾಧಾನವಿಲ್ಲ. ಬಾಲಕೃಷ್ಣ ಅವರನ್ನು ಶಾಸಕರನ್ನಾಗಿ ಮಾಡುವುದೇ ಗುರಿ ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಕೆಲವೆಡೆ ಬಾಯಿ ತಪ್ಪಿ ಬೇರೆಯವರನ್ನು ಹೊಗಳುತ್ತಿದ್ದಾರೆ, ಇದು ಸರಿಯಲ್ಲ ಎಂದು ಅವರ ಗಮನಕ್ಕೆ ತಂದಿದ್ದೇವೆ. ರೇವಣ್ಣ ಮತ್ತು ನಾವು ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ನರಸಿಂಹಮೂರ್ತಿ ತಿಳಿಸಿದರು.