

ಹುಬ್ಬಳ್ಳಿ: ರೌಂಡ್ ಟೇಬಲ್ ಇಂಡಿಯಾ ಆಂಡ್ ಲೇಡಿಸ್ ಸರ್ಕಲ್ ಇಂಡಿಯಾ ಸಹಯೋಗದೊಂದಿಗೆ ಫುಡ್ ಫ್ಯಾಶನ್ ಟ್ರೆಂಡ್ಜ್ ಕಂಪನಿಯು ನಗರದ ಗೋಕುಲ ರಸ್ತೆಯ ಹೊಟೇಲ್ ಕ್ಯೂಬಿಕ್ಸ್ನಲ್ಲಿ ಆಯೋಜಿಸಿರುವ 2 ದಿನಗಳ ಲಿಟ್ಲ್ ಫ್ಲೀ-ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಉದ್ಘಾಟಿಸಿದ ಹು-ಧಾ ಪೊಲೀಸ್ ಆಯುಕ್ತ ರಮಣ ಗುಪ್ತಾ ಮಾತನಾಡಿ, ರೌಂಡ್ ಟೇಬಲ್ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರೇ ಇದ್ದು, ಇದು ವ್ಯಕ್ತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಇಂಥ ಮೇಳಗಳು ಸ್ಥಳೀಯ ಮಾರುಕಟ್ಟೆಗೆ ಉತ್ತೇಜನ ನೀಡಲಿದೆ. ಸ್ವ ಸಹಾಯ ಸಂಘ, ಮಹಿಳೆಯರಿಗೆ ಅರ್ಥಿಕವಾಗಿ ಅನುಕೂಲವಾಗಲಿದೆ ಎಂದರು.
ರೌಂಡ್ ಟೇಬಲ್ ಏರಿಯಾ ಚೇರ್ಮನ್ ಹಿಮಾಂಶು ಕೊಠಾರಿ, ಉದ್ಯಮಿ ವಿಜೇಶ ಸೈಗಲ್, ತರುಣ ಮಹಾಜನ್, ಡಾ. ಪೂಜಾ ಮಹಾಜನ್, ಸಾಂಚಿ ಶರ್ವ, ಮಿತೇಶ ತೇಲಿಸರ, ಮನಿಷಾ ಅಗರ್ವಾಲ, ಅರ್ಜುನ ಮಹಾಜನ, ನೇಹಾ ಹತ್ತಿಕಾಳ, ಫುಡ್ ಫ್ಯಾಶನ್ ಟ್ರೆಂಡ್ಜ್ನ ನೇಹಾ ಅಗರ್ವಾಲ, ಇತರರು ಇದ್ದರು.
ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ದಿಗ್ವಿಜಯ ನ್ಯೂಸ್ ಸುದ್ದಿವಾಹಿನಿಯ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ಲಿಟ್ಲ್ ಫ್ಲೀ ಮೇಳದಲ್ಲಿ ಬ್ರ್ಯಾಂಡೆಡ್ ಕಂಪನಿಯ ನವನವೀನ ಉತ್ಪನ್ನಗಳ ಜತೆಗೆ ಮನೆಯಲ್ಲಿಯೇ ತಯಾರಿಸಿದ ಆಹಾರ ಉತ್ಪನ್ನಗಳು, ಮಸಾಲಾ ಪದಾರ್ಥಗಳು, ಮಹಿಳೆಯರೇ ತಯಾರಿಸಿದ ಉಡುಪುಗಳು, ಡ್ರೆಸ್ ಮಟಿರೀಯಲ್, ಆಭರಣಗಳು, ಸೌಂದರ್ಯ ವರ್ಧಕ, ಇತ್ಯಾದಿ ಫ್ಯಾಶನ್ ಸಾಮಗ್ರಿಗಳು ಗ್ರಾಹಕರನ್ನು ಸೆಳೆಯುತ್ತಿವೆ.