ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳ ಕುರಿತ ಕೃತಿ ಬಿಡುಗಡೆ

CTD ONTI KAMBA
Published on

ಚಿತ್ರದುರ್ಗ: ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಸಂದರ್ಭಕ್ಕೆ ಸರಿಯಾಗಿ ಪಾಂಡಿತ್ಯಪೂರ್ಣವಾಗಿ ಮಾತನಾಡುತ್ತಿದ್ದರು.ಮಾತನಾಡುವಾಗ ಅಹಂ ಕಾರ,ಕುಹಕ ಇರಬಾರದೆಂದು ಶ್ರೀ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಭಾನುವಾರ ನಡೆದ ಲಿಂ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರ ಣೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು,ಮಾತನಾಡುವ ಪ್ರತಿಮಾತು ಮಂತ್ರವಾಗಬೇಕು. ಏನು ಮಾತನಾಡಬೇಕೆ ಂದು ಪಟ್ಟಿ ಮಾಡದೇ,ಏನು ಮಾತನಾಡಬಾರದು ಎಂದರು.
ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳಿಗೆ ಸಾಟಿ ಬೇರೆ ಯಾರೂ ಇಲ್ಲ. ಅಥಣಿ ಶ್ರೀಗಳು,ಮೃತ್ಯುಂಜಯಪ್ಪಗಳು ಹಾಗೂ ಸಿದ್ಧಲಿಂಗ ಅಪ್ಪ ಗಳ ಆಶೀರ್ವಾದ ಮಲ್ಲಿಕಾರ್ಜುನ ಜಗದ್ಗುರುಗಳ ಮೇಲಿತ್ತು. ಅವರ ಸ್ಮರಣೋತ್ಸವ ದಿನದಂದು ಅವರ ಬಗ್ಗೆ ಅನೇಕ ವಿದ್ವಾಂಸರು ಬರೆ ದಿರುವ ಲೇಖನಗಳ ಸಂಗ್ರಹ ಕೃತಿ ಬಿಡುಗಡೆಗೊಳಿಸಲಾಗುವುದು. ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿ ಅವರು ಮಲ್ಲಿಕಾರ್ಜುನ ಶ್ರೀಗಳು ಲಿಂಗೈಕ್ಯರಾದಾಗ ಮೂವತ್ತು ಲೇಖನಗಳನ್ನು ಸಂಗ್ರಹಿಸಿದ್ದರೆಂದರು.
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಮಾತನಾಡಿ,ಮಲ್ಲಿಕಾರ್ಜುನ ಶ್ರೀಗಳು ದೊಡ್ಡ ಪಂಡಿತರು. ಅವರಿಗೆ ದಲಿತರ ಮೇಲೆ ಅಪಾರ ಕಾಳಜಿ ಇತ್ತು. ವಿದ್ವತ್ ಪರಂಪರೆಯಲ್ಲಿ ಶ್ರೀ ಮಠವು ದೊಡ್ಡ ಹೆಸರು ಮಾಡಿದೆ. ಶ್ರೀ ಗಳ ಸ್ಮರಣೋತ್ಸವವನ್ನು ಕಳೆದ 30 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ,ಮಲ್ಲಿಕಾರ್ಜುನ ಸ್ವಾಮೀಜಿ ಅವರು ನುಡಿದಂತೆ ನಡೆದವರು. ಅವರೊಂದು ಜ್ಞಾನದ ಶಿ ಖರ. 1964 ರಲ್ಲಿ ಶ್ರೀಗಳು ಪೀಠ ಅಲಂಕರಿಸುತ್ತಾರೆ. 1966ರಲ್ಲಿ ವಿದ್ಯಾಪೀಠವನ್ನು ಪ್ರಾರಂಭಿಸುತಾರೆ. ಆ ಶಿಕ್ಷಣ ಸಂಸ್ಥೆಗಳಲ್ಲಿಂದು ಸಾ ವಿರಾರು ಜನರು ಓದುತ್ತಿದ್ದಾರೆ. ಮಠವೆಂದರೆ ಮರವಿದ್ದ ಹಾಗೆ. ಲಿಂಗೈಕ್ಯ ಶ್ರೀಗಳು ಅನೇಕರಿಗೆ ಆಶ್ರಯ ಕೊಟ್ಟಿದ್ದಾರೆ. ಅವರ ಸಾಧನೆ ಗಳನ್ನು ಮೆಲುಕು ಹಾಕ ಬೇಕೆಂದರು.
ಕೆಇಬಿ ಷಣ್ಮುಖಪ್ಪ ಮಾತನಾಡಿ, ಜಯವಿಭವ ಶ್ರೀಗಳು ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿ ದರು. ಪೀಠಾಧೀಪತಿ ಆದ ಬಳಿಕ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಪ್ರತಿವರ್ಷ ಆಗಸ್ಟ್ 8ರಂದು ಅವರ ಸ್ಮರಣೆ ಕಾರ್ಯಕ್ರಮ ನಡೆ ಯಬೇಕೆಂದರು. ಎಚ್.ಆನಂದಪ್ಪ ಮಾತನಾಡಿ,ಸ್ಮರಣೋತ್ಸವದ ದಿನದ ಅನ್ನಸಂತರ್ಪಣೆ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿ ಸಿದರು. ಎಸ್.ಎಂ.ಕೊಟ್ರೇಶಪ್ಪ ಅವರು 10 ಸಾವಿರ ರೂ.ದೇಣಿಗೆ ನೀಡುವುದಾಗಿ ತಿಳಿಸಿದರು.
ಶ್ರೀ ಮಹಾಂತ ಸ್ವಾಮೀಜಿ,ಇಮ್ಮಡಿ ಕೇತೇಶ್ವರ ಸ್ವಾಮೀಜಿ,ಶ್ರೀ ಜಯಬಸವ ಸ್ವಾಮೀಜಿ,ಹೊಸದಿಲ್ಲಿಯ ಶ್ರೀ ಮಹಾಂತ ಪೂರ್ಣಾನಂ ದ ಸ್ವಾಮೀಜಿ,ಶ್ರೀ ತಿಪ್ಪೇರುದ್ರ ಸ್ವಾಮೀಜಿ,ಎಚ್.ಸಿ.ನಿರಂಜನಮೂರ್ತಿ,ಸುರೇಶ್‌ಬಾಬು ಇದ್ದರು. ಅಶ್ವಿನಿ ವಚನ ಪ್ರಾರ್ಥಿಸಿದರು. ಗಂಗಮ್ಮ ವೀರಭದ್ರಯ್ಯ ಸ್ವಾಗತಿಸಿದರು. ಪ.ಪಂ.ಸದಸ್ಯ ಮುರುಘೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net